ರೈತರು ಕೃಷಿ ಚಟುವಟಿಕೆ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ: ಸರ್ವೋತ್ತಮ ಜಾರಕಿಹೊಳಿ
inmudalgi
ಸೆಪ್ಟೆಂಬರ್ 24, 2022
Recent Posts, ತಾಲ್ಲೂಕು, ಬೆಳಗಾವಿ
ರೈತರು ಕೃಷಿ ಚಟುವಟಿಕೆ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ: ಸರ್ವೋತ್ತಮ ಜಾರಕಿಹೊಳಿ
*ಬಗರನಾಳ ಪಿಕೆಪಿಎಸ್‍ನಿಂದ ಟ್ಯಾಕ್ಟರ್ ವಿತರಣೆ, ಹಾಲು ಶಿಥಲೀಕರಣ ನೂತನ ಕೇಂದ್ರದ ಉದ್ಘಾಟನೆ * ಗಣ್ಯರಿಗೆ ಸತ್ಕಾರ * ಶ್ರೀಗಳಿಂದ ಆರ್ಶೀವಚನ
ಬೆಟಗೇರಿ:ರೈತರು ಕೃಷಿ ಚಟುವಟಿಕೆ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ರೈತರು ಸ್ವಾಭಿಮಾನದಿಂದ ಬದುಕಬೇಕು. ಕೆಎಂಎಫ್ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂದು ಕೆಎಂಎಫ್ ಅತ್ಯುತ್ತಮ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕಿನ ಬಗರನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ರೈತರಿಗೆ ಟ್ಯಾಕ್ಟರ್ ವಿತರಣೆ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶಿಥಲೀಕರಣ ನೂತನ ಕೇಂದ್ರದ ಉದ್ಘಾಟನೆ ಸೆ.21ರಂದು ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕೆಎಂಎಫ್ ಹಾಗೂ ಪಿಕೆಪಿಎಸ್ ಸಂಘದಿಂದ ದೊರಕುವ ವಿವಿಧ ಸಹಾಯ, ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬೇಕೆಂದರು.
ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 15ವರ್ಷಗಳಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಂತೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಬೆಂಬಲದೊಂದಿಗೆ ಬಗರನಾಳ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತೇವೆ ಎಂದರು.
ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಮುಖ್ಯ ಅತಿಥಿಗಳಾಗಿ ಅತಿಥಿಗಳಾಗಿ ಮಾತನಾಡಿ, ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಯಾಗಿವೆ. ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಮತ್ತು ಪಿಕೆಪಿಎಸ್ ಸಂಘಗಳಲ್ಲಿ ಹಲವಾರು ಸಹಾಯ, ಸೌಲಭ್ಯಗಳ ಪ್ರಯೋಜನಗಳಿವೆ ರೈತರು ಪಡೆದುಕೊಳ್ಳಬೇಕು ಎಂದರು.
ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಸ್ಥಳೀಯ ಬಸವಸಮರ್ಥ ಮಹಾಸ್ವಾಮಿಜಿ ನೇತೃತ್ವ ವಹಿಸಿ ಆರ್ಶೀವಚನ ನೀಡಿದರು. ನೂತನ ಟ್ಯಾಕ್ಟರ್ ಹಾಗೂ ಹಾಲು ಶಿಥಲೀಕರಣ ಕೇಂದ್ರದ ಪೂಜೆ, 5 ಹೊಸ ಟ್ಯಾಕ್ಟರ್ ಮಾಲೀಕರಿಗೆ ಕೀ, ಅತಿ ಹೆಚ್ಚು ಹಾಲು ಸಂಘಕ್ಕೆ ನೀಡಿದ ಸದಸ್ಯರಿಗೆ ಬಹುಮಾನ ವಿತರಣೆ ನಡೆದ ಬಳಿಕ ಶ್ರೀಗಳು, ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಿದರು.
ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ನಿಂಗಪ್ಪ ಕುರಬೇಟ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಮಲ್ಲು ಪಾಟೀಲ, ಎಮ್.ಎಮ್.ಕುರಬೇಟ, ಆರ್.ಎಸ್.ಸನದಿ, ವಿನೋದಕುಮಾರ ವಾಲಿ, ಎಸ್.ಬಿ.ಕರಬನ್ನವರ, ಬಿರೇಶ ಖಿಲಾರಿ, ಡಾ.ವೀರಣ್ಣಾ ಕೌಜಲಗಿ, ನಿಂಗಪ್ಪ ನೀಲಣ್ಣವರ, ಗಿರೀಶ ಹಳ್ಳೂರ, ಲಕ್ಮಣ ಚಂದರಗಿ, ಸಿದ್ದಪ್ಪ ಅಡವಿ, ರಾಮಪ್ಪ ಹಾವಾಡಿ, ಸುಭಾಷ ಹಾವಾಡಿ, ಬಸನಗೌಡ ಪಾಟೀಲ, ರಾಮಪ್ಪ ವೆಂಕಟಾಪೂರ, ಹನುಮಂತ ಹಾವಾಡಿ, ರಮೇಶ ಕಾಲುಂಗಾರ, ಮಲ್ಲಪ್ಪ ಹಾವಾಡಿ, ಸ್ಥಳೀಯ ಪಿಕೆಪಿಎಸ್ ಹಾಗೂ ಹಾಉಸ ಸಂಘಗಳ ಆಡಳಿತ ಮಂಡಳಿ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಗ್ರಾಮಸ್ಥರು ಇತರರು ಇದ್ದರು.