ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈರಯ್ಯ ಹಿರೇಮಠ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಶುಕ್ರವಾರ ಮೇ.14ರಂದು ನಡೆದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಷಟಸ್ಥಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬಸವಣ್ಣನವರು ವಚನಗಳನ್ನು ರಚಿಸಿ ಜಗತ್ತಿಗೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಇಂದು ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸಂಗಯ್ಯ ಹಿರೇಮಠ ಕಾರ್ಯಕ್ರಮದ ನೇತೃತ್ವ ವಹಿಸಿ, ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ ನೆರವೇರಿಸಿದರು. ಬಸವ ಜಯಂತಿ ಆಚರಣೆಯನ್ನು ಈ ಸಲ ಸರಳ ಹಾಗೂ ಸಾಂಕೇತಿಕವಾಗಿ ಸ್ಥಳೀಯ ಬಸವ ಅಭಿಮಾನಿ ಬಳಗದವರು ಆಚರಿಸಿದರು. ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.
ಬಸವರಾಜ ಪಣದಿ, ಮಲ್ಲಪ್ಪ ಪಣದಿ, ಈರಪ್ಪ ದೇಯಣ್ಣವರ, ಅಡಿವೆಪ್ಪ ಮುರಗೋಡ, ವೀರಸಂಗಪ್ಪ ದೇಯಣ್ಣವರ, ರಾಮಣ್ಣ ನೀಲಣ್ಣವರ, ಈರಪ್ಪ ಕಂಬಿ, ಬಸವ ಅಭಿಮಾನಿ ಬಳಗದ ಸದಸ್ಯರು, ಇತರರು ಇದ್ದರು.
