ಅ.25 ರಿಂದ ಬೆಟಗೇರಿ ಶ್ರೀ ದುರ್ಗಾದೇವಿ ದೇವರ ಜಾತ್ರಾಮಹೋತ್ಸವ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವರ ಜಾತ್ರಾಮಹೋತ್ಸವ ಇದೇ ಅ.25ರಿಂದ ಅ.26ರ ವರೆಗೆ ಎರಡು ದಿನಗಳ ಕಾಲ ನಡೆಯಲಿದೆ.
ಅ.25 ರಂದು ಬೆಳಿಗ್ಗೆ ಬ್ರಾಹ್ಮೀ ಶುಭ ಮೂಹರ್ತದಲ್ಲಿ ಇಲ್ಲಿಯ ಶ್ರೀ ದುರ್ಗಾದೇವಿ ದೇವರ ದೇವಾಲಯದಲ್ಲಿರುವ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಪುರಜನರಿಂದ ದೇವಿಗೆ ಉಡಿ ತುಂಬುವ, ಪೂಜೆ, ನೈವೇದ್ಯ ಸಮರ್ಪಣೆ, ಪುರದೇವರ ಪಲ್ಲಕ್ಕಿಗಳ ಆಗಮನ, ಸುಮಂಗಲೆಯರಿಂದ ಆರತಿ ಸಕಲ ವಾಧ್ಯಮೇಳಗಳೊಂದಿಗೆ ಪಲ್ಲಕ್ಕಿ ಬರಮಾಡಿಕೊಳ್ಳುವ ಕಾರ್ಯಕ್ರಮ ಜರುಗಲಿದೆ.
ಸ್ಥಳೀಯ ಯಲ್ಲಾಲಿಂಗ ಮಠದ ಆವರಣದಲ್ಲಿ ಮಧ್ಯಾಹ್ನ 11 ಗಂಟೆಗೆ ಹಾಲಲ್ಲಿ, ನಾಲ್ಕು ಹಲ್ಲಿನ ಹಾಗೂ ಓಪನ್ ಟಗರಿನ ಕಾಳಗ ಸ್ಫರ್ಧೆ ನಡೆದ ಬಳಿಕ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಇಲ್ಲಿಯ ದುರ್ಗಾದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ವತಿಯಿಂದ ವಿಜೇತ ತಂಡಗಳಿಗೆ ಆಕಷರ್Àಕ ನಗದು, ಡಾಲ್, ನಿಶಾನಿ, ಬಹುಮಾನಗಳನ್ನು ನೀಡಲಿದ್ದಾರೆ.
ಅ.26 ರಂದು ದುರ್ಗಾದೇವಿ ದೇವರ ಗದ್ದುಗೆಗೆ ಪೂಜೆ, ನೈವೇದ್ಯ ಸಮರ್ಪನೆ, ಮುಂಜಾನೆ 9 ಗಂಟೆಗೆ ಚಿಕ್ಕೋಡಿ ತಾಲೂಕಿನ ಜಾಗನೂರ ಶ್ರೀ ಬೀರಸಿದ್ಧೇಶ್ವರ ಗಾಯನ ಸಂಘ ಹಾಗೂ ರಾಯಬಾಗ ತಾಲೂಕಿನ ನಿಡಗುಂದಿ ಶ್ರೀ ರೇಣುಕಾದೇವಿ ಗಾಯನ ಸಂಘದವರಿಂದ ಹರದೇಶಿ-ನಾಗೇಶಿ ಡೊಳ್ಳಿನ ಪದಗಳ ಪ್ರದರ್ಶನ ನಡೆಯಲಿದೆ. ಮುಂಜಾನೆ 11 ಗಂಟೆಗೆ ಮಹಾಪ್ರಸಾದದ ನಂತರ ಬಂಡಾರ ಒಡೆಯುವ ಕಾರ್ಯಕ್ರಮ ಜರುಗಿ ಜಾತ್ರಾ ಮಹೋತ್ಸವ ಸಮಾರೂಪಗೊಳ್ಳಲಿದೆ.
ವಿವಿಧ ಟಗರಿನ ಕಾಳಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮೊ.ನಂ. 9880850851, 8861246872 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕು ಎಂದು ಇಲ್ಲಿಯ ದುರ್ಗಾದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಮಾಯಪ್ಪ ಬಾಣಸಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.