ಬೆಟಗೇರಿ:ಗ್ರಾಹಕರು ತಮ್ಮ ನಿತ್ಯದ ದುಡಿಮೆಯಲ್ಲಿ ಗಳಿಸಿದ ಹಣವನ್ನು ಅನವಶ್ಯಕವಾಗಿ ಖರ್ಚ ಮಾಡದೇ ಉಳಿತಾಯ ಮಾಡುವುದರಿಂದ ಮುಂದೆ ತಮ್ಮ ಬದುಕಿಗೆ ಆಶ್ರಯವಾಗುತ್ತದೆ. ಇಂದಿನ ಉಳಿತಾಯ ನಾಳಿನ ಗಳಿಕೆ ಎಂದು ಬಿ.ಡಿ.ಸಿ.ಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಬೆಟಗೇರಿ ಶಾಖೆಯ 6 ನೇ ವಾರ್ಷಿಕೋತ್ಸವದಲ್ಲಿ ಪೂಜಿನೇರವೇರಿಸಿ ಮಾತನಾಡಿದ ಸತೀಶ ಕಡಾಡಿ ಅವರು ಗ್ರಾಮೀಣ ವಲಯದಲ್ಲಿ ಸಂಘ ಸಂಸ್ಥೆಗಳು ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ ಸಹಕಾರ ಅವಶ್ಯವಾಗಿದೆ. ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗ,ಆಡಳಿತ ಮಂಡಳಿ ಸದಸ್ಯರು,ಪದಾಧಿಕಾರಿಗಳು ನಿಶ್ವಾರ್ಥ ಸೇವಾ ಮನೋಭಾವನೆ ಹೊಂದಬೇಕೇಂದರು.
ಬೆಟಗೇರಿ ಶಾಖೆಯು 2881 ಶೇರು ಸದಸ್ಯರನ್ನು ಹೊಂದಿ, ಗ್ರಾಹಕರಿಂದ ರೂ 12.30 ಕೋಟಿ ಠೇವು ಸಂಗ್ರಹಿಸಿದೆ, ರೂ 14.50 ಕೋಟಿ ವಿವಿಧ ಸಾಲವನ್ನು ನೀಡಿ ಸಹಕಾರಿಯು ಪ್ರಗತಿ ಪಥದಲ್ಲಿ ಸಾಗಿದೆ ಎಂದರು.ಈ ವೇಳೆ ಸಹಕರಿಯ ಗ್ರಾಹಕರಿಗೆ ಸಿಹಿ ವಿತರಿಸಲಾಯಿತು.
ಸಹಕಾರಿ ನಿರ್ದೇಶಕರಾದ ಮಲ್ಲಿಕಾರ್ಜುನ ಹುಲೇನವರ,ಸಿದ್ದಪ್ಪ ಹೆಬ್ಬಾಳ,ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯನ್ನವರ,ಸದಸ್ಯರಾದ ವಿಠ್ಠಲ ಕೊಣಿ,ರಮೇಶ ಬ್ಯಾಗಿ,ಅಜ್ಜಪ್ಪ ಪೇದನ್ನವರ,ಶ್ರೀಕಾಂತ ಕರೆಪ್ಪಗೋಳ,ಹಣಮಂತ ಸವತಿಕಾಯಿ ಪ್ರಮುಖರಾದ ಈಶ್ವರ ಮುಧೋಳ ಸೇರಿದಂತೆ ಅನೇಕ ಸಹಕಾರಿಯ ಸದಸ್ಯರು ಉಪಸ್ಥಿತಿತರಿದ್ದರು.
ಶಾಖಾ ವ್ಯವಸ್ಥಾಪಕ ಶಂಕರ ಕೌಜಲಗಿ ಸ್ವಾಗತಿಸಿದರು.ಸುರೇಶ ಮಠದ ಕಾರ್ಯಕ್ರಮ ನಿರೂಪಿಸಿದರು.ಪ್ರಶಾಂತ ಪಟ್ಟಣಶೆಟ್ಟಿ ವಂದಿಸಿದರು.
