ಸಡಗರದಿಂದ ನಡೆದ ಬೆಟಗೇರಿ ಶ್ರೀಲಕ್ಷ್ಮೀದೇವಿ ಜಾತ್ರಾಮಹೋತ್ಸವ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅ.27 ರಿಂದ ಅ.28 ಎರಡು ದಿನಗಳ ಕಾಲ ಸಂಭ್ರಮ ಮತ್ತು ಸಡಗರದಿಂದ ಜರುಗಿತು.
ಅ.27ರಂದು ಬೆಳಗ್ಗೆ, ಸಂಜೆ 7 ಗಂಟೆಗೆ ಸ್ಥಳೀಯ ಲಕ್ಷ್ಮೀದೇವಿ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ಗುಗೆಗೆ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪನೆ, ರಾತ್ರಿ 8 ಗಂಟೆಗೆ ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಅ.28ರಂದು ಮುಂಜಾನೆ, ಸಾಯಂಕಾಲ 7 ಗಂಟೆಗೆ ಶ್ರೀಲಕ್ಷ್ಮೀದೇವಿ ದೇವರ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ, ದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ ಪೂಜೆ, ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ಸಂಭ್ರಮದಿಂದ ನಡೆದ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು. ಮಹಾಪ್ರಸಾದದೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ರಾಮಣ್ಣ ಬಳಿಗಾರ, ಮುತ್ತೆಪ್ಪ ವಡೇರ, ಲಕ್ಷ್ಮಣ ಚಂದರಗಿ, ಮುತ್ತೆಪ್ಪ ಮಾಕಾಳಿ, ಶಿವಾಜಿ ನೀಲಣ್ಣವರ, ಬಸವರಾಜ ಪಣದಿ, ನಿಂಗಪ್ಪ ಪೂಜೇರ, ಸಂಜು ಪೂಜೇರ, ವಿಠಲ ಚಂದರಗಿ, ಶ್ರೀಶೈಲ ಗಾಣಗಿ, ಯಲ್ಲಪ್ಪ ಬಾಣಸಿ, ಭರಮಪ್ಪ ಪೂಜೇರಿ, ಸುಮಂಗಲೆಯರು ಸೇರಿದಂತೆ ಸ್ಥಳೀಯ ಗಣ್ಯರು, ಇಲ್ಲಿಯ ಶ್ರೀಲಕ್ಷ್ಮೀದೇವಿ ಜಾತ್ರಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಗ್ರಾಮಸ್ಥರು ಇದ್ದರು.