ದಾಸ ಸಾಹಿತ್ಯದಲ್ಲಿ ಕನಕದಾಸರಿಗೆ ಶ್ರೇಷ್ಠ ಸ್ಥಾನವಿದೆ : ರಮೇಶ ಹಾಲಣ್ಣವರ
ಬೆಟಗೇರಿ:ಕನಕದಾಸರು ರಚಿಸಿದ ಕೃತಿಗಳು ಇಂದಿಗೂ ಸಹ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ದಾಸಶ್ರೇಷ್ಠ ಕನಕದಾಸ ಅಭಿಮಾನಿ ಬಳಗದ ಸಂಚಾಲಕ ರಮೇಶ ಹಾಲಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕನಕದಾಸÀ ಅಭಿಮಾನಿ ಬಳಗದ ಸಹಯೋಗದಲ್ಲಿ ನ.11ರಂದು ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕನಕದಾಸರು ಮತ್ತು ಪುರದಂರದಾಸರು ಕನ್ನಡ ಸಾರಸ್ವತ ಲೋಕದ ಎರಡು ಕಣ್ಣುಗಳಿದ್ದಂತೆ, ದಾಸ ಸಾಹಿತ್ಯದಲ್ಲಿ ಕನಕದಾಸರಿಗೆÉ ಶ್ರೇಷ್ಠ ಸ್ಥಾನವಿದೆ ಎಂದರು.
ಸುರೇಶ ವಡೇರ ಸಾನಿಧ್ಯ ವಹಿಸಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು. ಸ್ಥಳೀಯ ಬೀರಸಿದ್ದೇಶ್ವರ ದೇವರ ಮಹಾದ್ವಾರ ಮುಂದೆ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಇಲ್ಲಿಯ ವಿವಿಧ ವೃತ್ತದ ಪುತ್ಥಳಿಗಳಿಗೆ ಪೂಜೆ, ಪುಷ್ಪಾರ್ಪನೆ ಜರುಗಿ, ಗ್ರಾಮದ ಪ್ರಮುಖ ಬೀದಿಂiÀiಲ್ಲಿ ಡೊಳ್ಳಿನ ಮೇಳ ಸೇರಿದಂತೆ ಸಕಲ ವಾದ್ಯಮೇಳದವರೊಂದಿಗೆ ಬೀರಸಿದ್ದೇಶ್ವರ ದೇವರ ಮಹಾದ್ವಾರದಿಂದ ಭಕ್ತ ಕನಕದಾಸರ ವೃತ್ತದ ತನಕ ಕನಕದಾಸರ ಭಾವ ಚಿತ್ರದ ಭವ್ಯ ಮೆರವಣಿಗೆ ಜರುಗಿತು.
ಹನುಮಂತ ವಡೇರ, ಬನಪ್ಪ ಚಂದರಗಿ, ವಿಠಲ ಚಂದರಗಿ, ಮಹಾದೇವ ಹೊರಟ್ಟಿ, ಎಚ್.ಎನ್.ಬಾವಿಕಟ್ಟಿ, ಬಸವರಾಜ ಪಣದಿ, ಶಿವನಪ್ಪ ಮಾಳೇದ, ಸುಭಾಷ ಜಂಬಗಿ, ಸುರೇಶ ಬಾನಸಿ, ಪ್ರಕಾಶ ಹಾಲಣ್ಣವರ, ಮಹಾಂತೇಶ ಪೂಜೇರಿ, ವಿಠಲ ಕೋಣಿ, ಬೀರಪ್ಪ ಕುರಬೇಟ, ಮಾಯಪ್ಪ ಕೋಣಿ, ಭರಮಪ್ಪ ಪೂಜೇರಿ, ನಿಂಗಪ್ಪ ಬ್ಯಾಗಿ, ಉದಯ ಹೊಂಗಲ, ಮಹಾದೇವ ತಪಸಿ, ಮಹಾನಿಂಗ ಕುರಿ, ಸ್ಥಳೀಯ ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಕನಕದಾಸ ಅಭಿಮಾನಿ ಬಳಗದ ಸದಸ್ಯರು, ಗಣ್ಯರು, ಯುವಕರು, ಇತರರು ಇದ್ದರು.