ಬೆಟಗೇರಿ ಸುತ್ತಮುತ್ತ ಧಾರಾಕಾರ ಸುರಿದ ಮಳೆ, ಆತಂಕದಲ್ಲಿ ರೈತರು..!
ಬೆಟಗೇರಿ: ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದೆರಡು ದಿನ ಜಿಟಿ ಜಿಟಿ ಮಳೆಯಾಗಿದ್ದರೆ, ಶುಕ್ರವಾರ ಜು.23ರಂದು ದಿನವಿಡಿ ಎಡಬಿಡದೇ ಧಾರಾಕಾರ ಮಳೆ ಸುರಿದು ರೈತರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಕಳೆದೆರಡ್ಮೂರೂ ದಿನಗಳಿಂದ ಎಡಬಿಡದೇ ಧರೆಗಿಳಿದ ಈ ಮಳೆ ಭೂಮಿ ತಂಪಾಗಿಸಿ ಈ ಭಾಗದ ರೈತರು ಒಂದಡೆ ನಿಟ್ಟಿಸಿರು ಬಿಡುವಂತಾದರೆ, ಇನ್ನೂಂದಡೆ ಧಾರಾಕಾರ ದಿನವಿಡಿ ಸುರಿಯುತ್ತಿರುವ ಈ ಮಳೆಯಿಂದಾಗಿ ಗೋವಿನಜೋಳ ಸೇರಿದಂತೆ ಕೆಲವು ಬೆಳೆಗಳು ಭೂಮಿಯಲ್ಲಿ ನೆಲಕಚ್ಚಿ ಸಂಪೂರ್ಣ ನಾಶವಾಗುವ ಆತಂಕದ ದುಸ್ಥಿತಿ ಇಲ್ಲಿಯ ರೈತರಿಗೆ ಎದುರಾಗಿದೆ.
ಧಾರಾಕಾರ ಇಂದು ಸುರಿದ ಮಳೆಗೆ ಬೆಟಗೇರಿ ಗ್ರಾಮದ ಕೆಲವು ಓಣಿಯ ಪಕ್ಕದ ಗಟಾರಗಳು ಮಳೆ ನೀರು ತುಂಬಿ, ರಸ್ತೆ ಮೇಲೆ ಹರಿದು ಕೆಲ ಹೊತ್ತು ಓಣಿಯ ಕೆಲವು ರಸ್ತೆ ಮೇಲೆ ಜನರು ಓಡಾಡದಂತಾಗಿತ್ತು. ತೋಟ-ಗದ್ದೆಗಳಿಂದ ದನಕರುಗಳಿಗೆ ಮೇವು ತರಲು ಜನರು ಪರದಾಡುವಂತಾಗಿತ್ತು. ಜನ-ಜಾನುವಾರಗಳ ಜೀವನ ಅಸ್ತವ್ಯಸ್ತವಾದ ದೃಶ್ಯ ಕಂಡುಬಂದಿತು. ಶುಕ್ರವಾರ ದಿನವಿಡಿ ಧಾರಾಕಾರ ಮಳೆÉಯಾಗಿ ಕೆಲವು ಬೆಳೆಗಳು ನಾಶವಾಗುವಂತಾಗಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.