ಬೆಟಗೇರಿ ಹನುಮಂತ ದೇವರ ಕಾರ್ತಿಕೋತ್ಸವ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹನುಮಂತ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಡಿ.10ರಂದು ನಡೆಯಲಿವೆ.
ಡಿ.10ರಂದು ಬೆಳಿಗ್ಗೆ ಬ್ರಾಹ್ಮೀ ಮೂಹರ್ತದಲ್ಲಿ ಇಲ್ಲಿಯ ಹನುಮಂತ ದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಎಲೆ ಪೂಜೆ ಕಾರ್ಯಕ್ರಮ, ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪನೆ, ಸಂಜೆ 6 ಗಂಟೆಗೆ ಬೆಟಗೇರಿ ಗ್ರಾಮದ ಕರಡಿ ಮಜಲು ಮೇಳ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ ಹಾರಿಸುವದು, ಸಿಹಿ ಹಂಚುವದು, ಕಾರ್ತಿಕ ದೀಪೋತ್ಸವ, ಮಹಾಪ್ರಸಾದದ ಬಳಿಕ ರಾತ್ರಿ 10 ಗಂಟೆಗೆ ಗೋಕಾಕದ ಸರ್ವೇಶ್ವರ ಪ್ರಸಾದಿತ ಶಿವ ಕಾಳಿಕಾಂಬಾ ಸಾಂಸ್ಕøತಿಕ ಸಂಸ್ಥೆ ಕಲಾವಿದರಿಂದ ಭಕ್ತಿ ಪ್ರಧಾನ ನಿಜಗುಣ ಶಿವಯೋಗಿ ಸಣ್ಣಾಟ ಖ್ಯಾತ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಸಾನಿಧ್ಯ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಮುತ್ತೆಪ್ಪ ವಡೇರ, ಬಸಪ್ಪ ವಡೇರ ನೇತೃತ್ವ ವಹಿಸಲಿದ್ದಾರೆ. ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮುಖ್ಯಅತಿಥಿಗಳಾಗಿ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಇಲ್ಲಿಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಹನುಮಂತ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.