Breaking News
Home / Recent Posts / ಸಸಿಗಳ ಸಂರಕ್ಷಣೆ ಕಾರ್ಯ ಗೋಕಾಕ ಸಾಮಾಜಿಕ ಅರಣ್ಯ ಇಲಾಖೆಗೆ ಸ್ಥಳೀಯರಿಂದ ಮೆಚ್ಚುಗೆ

ಸಸಿಗಳ ಸಂರಕ್ಷಣೆ ಕಾರ್ಯ ಗೋಕಾಕ ಸಾಮಾಜಿಕ ಅರಣ್ಯ ಇಲಾಖೆಗೆ ಸ್ಥಳೀಯರಿಂದ ಮೆಚ್ಚುಗೆ

Spread the love

ಸಸಿಗಳ ಸಂರಕ್ಷಣೆ ಕಾರ್ಯ
ಗೋಕಾಕ ಸಾಮಾಜಿಕ ಅರಣ್ಯ ಇಲಾಖೆಗೆ ಸ್ಥಳೀಯರಿಂದ ಮೆಚ್ಚುಗೆ
*ವರದಿ: ಅಡಿವೇಶ ಮುಧೋಳ.

ಬೆಟಗೇರಿ: ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪ ಈಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರಸಕ್ತ ವರ್ಷ ನೆಡಲಾದ ಸಸಿಗಳಿಗೆ ಗೋಕಾಕ ವಲಯದ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು, ಸಸಿಗಳಿಗೆ ಮುಳ್ಳಿನ ಬೇಲಿ ಕಟ್ಟುವ ಕೆಲಸ ಕೆಲ ದಿನಗಳಿಂದ ಭರದಿಂದ ನಡೆದಿದೆ.


ಕಳೆದ ವರ್ಷ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಗೈರಾಣ ಪ್ರದೇಶ, ಗ್ರಾಮದ ಪ್ರಮುಖ ರಸ್ತೆ ಸೇರಿದಂತೆ ಹಲವಡೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹುಲಗಲ, ತಪಸಿ, ಸಿಸ್ಸು, ಬೇವು, ಆಲ, ಅರಳಿ, ಜಾಂಬಳ, ಕ್ಯಾರ ಗಿಡಗಳಲ್ಲದೆ ಸೀತಾಫಲ, ನೆರಳೆ, ಗೋಣಿ, ಬಸರಿ, ಸೇರಿದಂತೆ ವಿವಿಧ ಜಾತಿಯ ಸುಮಾರು 4400 ಸಸಿಗಳನ್ನು ನೆಡಲಾಗಿತ್ತು, ಅವುಗಳಲ್ಲಿ ಈಗ ಸುಮಾರು ಎಲ್ಲಾ ಸಸಿಗಳು ಬದುಕುಳಿದಿವೆ. ಸದ್ಯ ನೀರು ಸರಬುರಾಜು ಟ್ಯಾಂಕರ್ ಮತ್ತು ಕೂಲಿ ಕಾರ್ಮಿಕರ ಮೂಲಕ ನೀರುಣಿಸಿ ಸಸಿಗಳನ್ನು ಸಂರಕ್ಷಣೆ ಹಾಗೂ ಮಳೆ ಆಗುವವರೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ವಲಯಾಧಿಕಾರಿ ಆನಂದ ಹೆಗಡೆ ತಿಳಿಸಿದ್ದಾರೆ.


ಗೋಕಾಕ ಅರಣ್ಯ ಇಲಾಖೆಯವರು ಸಸಿಗಳನ್ನು ನೆಡುವ ಜತೆಗೆ ಅವುಗಳ ರಕ್ಷಣೆಗೆ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಗಿದೆ. ಒಟ್ಟಿನಲ್ಲಿ ನೆಟ್ಟ ಸಸಿಗಳನ್ನು ಪೋಷಿಸುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಗೋಕಾಕದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿಗಳ ಪರಿಶ್ರಮ ಮತ್ತು ಸೇವೆಯನ್ನು ಸಾಮಾಜಿಕ ಅರಣ್ಯಾಧಿಕಾರಿ ಆನಂದ ಹೆಗಡೆ ಶ್ಲಾಘಿಸಿದ್ದಾರೆ. ಅಲ್ಲದೇ ಸಾಮಾಜಿಕ ಅರಣ್ಯ ಇಲಾಖೆಯವರ ಸಸಿಗಳ ಸಂರಕ್ಷಣೆ ಕಾರ್ಯಕ್ಕೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಾರ್ವಜನಿಕರು, ವಾಹನ ಸವಾರರು, ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳಲ್ಲಿಯ ಕೆಲ ರೈತರು ಸಸಿಗಳಿಗೆ ನೀರು ಕೊಟ್ಟು ಸಹಕರಿಸುತ್ತಿದ್ದಾರೆ. ಹಲವು ಹಳ್ಳಿಗಳಲ್ಲಿ ವಿವಿಧ ಕಡೆ ನೆಡಲಾದ ಸಸಿ, ಗಿಡಗಳನ್ನು ದನ-ಕರು, ಕುರಿ-ಮೇಕೆಗಳನ್ನು ಬಿಟ್ಟು ನಾಶಮಾಡದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ಸಾರ್ವಜನಿಕರಲ್ಲಿ ಗೋಕಾಕ ವಲಯದ ಸಾಮಾಜಿಕ ಅರಣ್ಯ ಇಲಾಖೆಯ ವಲಯಾಧಿಕಾರಿ ಆನಂದ ಹೆಗಡೆ ಮನವಿ ಮಾಡಿಕೊಂಡಿದ್ದಾರೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ