ಫೆ.15ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಬೆಟಗೇರಿ ಸದ್ಭಭಕ್ತರಿಂದ ಪಾದಯಾತ್ರೆ
ಬೆಟಗೇರಿ:ಗ್ರಾಮದ ಸದ್ಗುರು ಸಿದ್ಧಾರೂಢರ ಸದ್ಭಕ್ತರು ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳಸಲಿರುವ ಪ್ರಯುಕ್ತ ಫೆ.15ರಂದು ಮುಂಜಾನೆ 9 ಗಂಟೆಗೆ ಸ್ಥಳೀಯ ಶ್ರೀ ಬಸವೇಶ್ವರ ವೃತ್ತದಲ್ಲಿ 7ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಸ್ಥಳೀಯ ಈಶ್ವರ ಭನಜಾ ಮಂಡಳಿ ಅಧ್ಯಕ್ಷ ಬಸಪ್ಪ ದೇಯಣ್ಣವರ ಅಧ್ಯಕ್ಷತೆ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಶರಣರಾದ ಬಸವರಾಜ ಪಣದಿ ಸಮ್ಮುಖ, ಶರಣರಾದ ಮಲ್ಲಪ್ಪ ಪಣದಿ, ಸಿದ್ದಪ್ಪ ಹೊರಟ್ಟಿ, ಬಾಳಪ್ಪ ಕನೋಜಿ ನೇತೃತ್ವ ವಹಿಸಲಿದ್ದು, ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶರಣರಾದ ಸುಭಾಷ ಕರೆಣ್ಣವರ, ಮಾಯಪ್ಪ ಬಾಣಸಿ ಮುಖ್ಯತಿಥಿಗಳಾಗಿ, ಸ್ಥಳೀಯ ಗಣ್ಯರು, ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಫೆ.15ರಂದು ಬೆಟಗೇರಿ ಗ್ರಾಮದಿಂದ ಪಾದಯಾತ್ರೆ ಆರಂಭವಾಗಿ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಅಮ್ಮಿನಬಾವಿ, ಚಂದನಮಟ್ಟಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಫೆ.18ರಂದು ಪಾದಯಾತ್ರೆ ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಮಠ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಇದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊಬೈಲ್ ನಂ: 9980705123, 9901139091, 9902081990 ಸಂಪರ್ಕಿಸಬೇಕೆಂದು ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ
ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.