ಬೆಟಗೇರಿ ಗ್ರಾಮದಲ್ಲಿ ತೋಟಪಟ್ಟಿ ರಸ್ತೆ ಕಾಮಗಾರಿಗೆ ಚಾಲನೆ
ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾರ್ಗದರ್ಶನದಲ್ಲಿ ಬೆಟಗೇರಿ ಗ್ರಾಮದ ನಾಗರಿಕರಿಗೆ ಈಗಾಗಲೇ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಪಂಚಾಯತಿ ಸಹಯೋಗದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸುಮಾರು 6 ಲಕ್ಷ ರೂ.ಗಳ ವೆಚ್ಚದಲ್ಲಿ ಸ್ಥಳೀಯ ತಿಗಡಿ ಮುಖ್ಯ ರಸ್ತೆಯಿಂದ ಯಲ್ಲಪ್ಪ ಮಲ್ಲಾಪೂರ ಹೊಲದ ತನಕ ಸುಮಾರು 2 ಕಿ.ಮೀ, ತೋಟಪಟ್ಟಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಎಂಎಫ್ ಅಧ್ಯಕ್ಷ, ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಗ್ರಾಮಸ್ಥರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಅಭಿಪ್ರಾಯಪಟ್ಟರು.
ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಶಿವನಪ್ಪ ಮಾಳೇದ, ಶಂಕರ ಅಂದಾನಿ, ಹನುಮಂತ ವಗ್ಗರ, ಸುಭಾಷ ಕರೆಣ್ಣವರ, ಸುಭಾಷ ಜಂಬಗಿ, ಭೀಮಶೆಪ್ಪ ಹೊಂಗಲ, ಸಿದ್ದಪ್ಪ ಬಾಣಸಿ, ಗ್ರಾಪಂ ಸುರೇಶ ಬಾಣಸಿ, ವಿಠಲ ಚಂದರಗಿ, ರಾಮಣ್ಣ ಕತ್ತಿ, ಮಾರುತಿ ಬಣಜಿಗೇರ, ಹನುಮಂತ ಚಂದರಗಿ, ಯಲ್ಲಪ್ಪ ಚಂದರಗಿ, ಶಿವನಪ್ಪ ಹಾಲಣ್ಣವರ, ಧರೆಪ್ಪ ಚಂದರಗಿ, ಗಣ್ಯರು, ಗ್ರಾಮಸ್ಥರು ಇದ್ದರು.