ಬೆಟಗೇರಿ: ಮಾ.27ರಿಂದ ಆರಂಭಗೊಂಡ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಜರುಗಿದ ಪ್ರಸಕ್ತ ಸಾಲಿನ 8 ನೇ ತರಗತಿ ಪಬ್ಲಿಕ್ (ಮೌಲ್ಯಾಂಕನ)ಪರೀಕ್ಷೆ ಹಿನ್ನಲೆಯಲ್ಲಿ ಏ.1ರಂದು ಸಮಾಜ ವಿಜ್ಞಾನ ವಿಷಯದ ಕೊನೆಯ ಪರೀಕ್ಷೆ ನಡೆಯಿತು.
ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ 6 ಪರೀಕ್ಷಾ ಕೊಠಡಿ, 6 ಜನ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಒಬ್ಬರು ಸ್ಥಾನಿಕ ವಿಕ್ಷಕ ಜಾಗೃತ ದಳ, ಒಬ್ಬರು ಪರೀಕ್ಷಾ ಮುಖ್ಯ ಅಧಿಕ್ಷಕ, ಓರ್ವ ಕಸ್ಟೊಡಿಯನ್, ಒಬ್ಬರು ಪರೀಕ್ಷಾ ಕೇಂದ್ರದ ಸಹಾಯಕ ಕಾರ್ಯನಿರ್ವಹಿಸಿದರು. ಇಲ್ಲಿಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 247 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು ಎಂದು ಸ್ಥಳೀಯ ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮೇಶ ಅಳಗುಂಡಿ ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ವಿಷಯದ ಕೊನೆಯ ಪರೀಕ್ಷೆ ಬರೆದು, ಪರೀಕ್ಷಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ತಾವು ಉತ್ತರಿಸಿರುವ ಅಂಕಗಳ ಕುರಿತು ತಮ್ಮ ತಮ್ಮಲ್ಲಿ ಲೆಕ್ಕ ಮಾಡುತ್ತಾ ನಗು ಮೊಗದಲ್ಲಿ ಪರೀಕ್ಷಾ ಕೇಂದ್ರದ ಕೊಠಡಿಯಿಂದ ಹೊರ ಬಂದರು.
