ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಹುಮತಗಳ ಅಂತರದಿಂದ ಆಯ್ಕೆ ಮಾಡಿ: ಲಕ್ಷ್ಮಣ ಚಂದರಗಿ
ಬೆಟಗೇರಿ:ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ, ಅರಭಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಹುಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಬೆಟಗೇರಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ, ಮುಖಂಡ ಲಕ್ಷ್ಮಣ ಚಂದರಗಿ ಹೇಳಿದರು.
ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ, ಮುಖಂಡ ಲಕ್ಷ್ಮಣ ಚಂದರಗಿ ನೇತೃತ್ವದಲ್ಲಿ ಗ್ರಾಮದ ವಾರ್ಡ ನಂ-3 ಮತ್ತು 4ರಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ಮತದಾರರಲ್ಲಿ ಮತಯಾಚಿಸಿ ಮನವಿ ಮಾಡಿಕೊಂಡರು.
ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನಮ್ಮೆಲ್ಲರ ಎಲ್ಲಾ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಬಾಲಚಂದ್ರ ಜಾರಕಿಹೊಳಿ ಅವರು ಅಪರೂಪದ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಎಲ್ಲರೂ ಒಗ್ಗಟಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ, ಈ ಸಲ ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮನವಿ ಮಾಡಿಕೊಂಡರು.
ಬಸವರಾಜ ದಂಡಿನ, ಈರಣ್ಣ ಬಳಿಗಾರ, ಅಶೋಕ ಕೋಣಿ, ಈಶ್ವರ ಮುಧೋಳ, ಈರಪ್ಪ ದೇಯಣ್ಣವರ, ಬಸವರಾಜ ಮುಧೋಳ, ರಾಮಣ್ಣ ಮುಧೋಳ, ಬಸವರಾಜ ಚಂದರಗಿ, ಮುತ್ತೆಪ್ಪ ವಡೇರ, ರುದ್ರಪ್ಪ ದೇಯಣ್ಣವರ, ಹನುಮಂತ ಚಂದರಗಿ, ಸಿದ್ದರೂಢ ವಡೇರ, ಹನುಮಂತ ಸವತಿಕಾಯಿ, ಸಿದ್ಧಾರೂಢ ಸವತಿಕಾಯಿ, ಅಜ್ಜಪ್ಪ ಪೇದನ್ನವರ, ಕೆಂಪಣ್ಣ ಪೇದನ್ನವರ, ಈರಣ್ಣ ಕಂಬಿ, ಮಾನಪ್ಪ ಬಡಿಗೇರ, ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಇದ್ದರು.