ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಪೂರ್ವಭಾವಿ ಸಭೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವ ಮುಂಬರುವ ಜುಲೈ.24 ರಿಂದ ಜುಲೈ.28ರ ತನಕ ಜರುಗಲಿರುವ ಪ್ರಯುಕ್ತ ಬೆಟಗೇರಿ ಗ್ರಾಮದ ಸರ್ವ ಸಮಾಜದ ಹಿರಿಯ ನಾಗರಿಕರ ಮತ್ತು ಮುಖಂಡರು ಹಾಗೂ ಸ್ಥಳೀಯರ ಗ್ರಾಮದೇವತೆ ಜಾತ್ರಾಮಹೋತ್ಸವದ ರೂಪರೇಷಗಳ ಕುರಿತು ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜೂ.13 ರಂದು ಸಭೆ ನಡೆಯಿತು.
ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಶ್ರೀದೇವಿಯ ಜಾತ್ರಾಮಹೋತ್ಸವ ನಡೆಯಲಿದ್ದು, ಸ್ಥಳೀಯರು ತನು, ಮನ, ಧನ ಸಹಾಯ, ಸಹಕಾರ ನೀಡಿ, ಈ ಸಲ ಶ್ರೀದೇವಿಯ ಜಾತ್ರಾಮಹೋತ್ಸವ ವಿಜೃಂಭನೆಯಿಂದ ಆಚರಿಸಿ, ಯಶಸ್ವಿಗೊಳಿಸುವಂತೆ ಸ್ಥಳೀಯ ಸರ್ವ ಸಮುದಾಯದ ಹಿರಿಯ ನಾಗರಿಕರು, ಮುಖಂಡರು, ಯುವಕರಲ್ಲಿ ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಮನವಿ ಮಾಡಿಕೊಂಡರು.
ಈ ವೇಳೆ ಗ್ರಾಮದೇವತೆ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಸ್ಥಳೀಯ ಎಲ್ಲ ಸಮಾಜದ ಹಿರಿಯರು, ಮುಖಂಡರು, ಯುವಕರು ಶ್ರೀದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರ ಜೋತೆ ಚರ್ಚಿಸಿದರು.
ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಯುವಕರು, ಸ್ಥಳೀಯರು, ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀದೇವಿ ದೇವಸ್ಥಾನದ ಅರ್ಚಕರು, ಮತ್ತೀತರರು ಇದ್ದರು.
IN MUDALGI Latest Kannada News