ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಕೌಜಲಗಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾರ್ಯ ಮೆಚ್ಚುವಂತದ್ದಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅರಭಾಂವಿ ಮತಕ್ಷೇತ್ರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಶಾಸಕರ ಅನುದಾನದಡಿಯಲ್ಲಿ ಕೌಜಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 15 ಲಕ್ಷ ರೂ.ಗಳ ವೆಚ್ಚದಲ್ಲಿ ನೀಡಿರುವ ನೂತನ ಅಂಬ್ಯುಲೆನ್ಸ್ ತುರ್ತು ನೂತನ ವಾಹನ ಸಮರ್ಪಿಸಿ, ಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿಯ ಪಿಎಚ್‍ಸಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ತುರ್ತು ನೂತನ ವಾಹನದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ತಿಳಿಸಿದರು.
ಎಂ.ಆರ್.ಭೋವಿ, ವೆಂಕಟೇಶ ದಳವಾಯಿ, ಶಿವು ಲೋಕನ್ನವರ, ನೀಲಪ್ಪ ಕೇವಟಿ, ರವಿ ಪರುಶೆಟ್ಟಿ, ಬಸವರಾಜ ಜೋಗಿ, ಸುಭಾಷ ಕೌಜಲಗಿ, ಭೀಮಶಿ ಮಿರ್ಜಿ, ಯಲ್ಲಪ್ಪ ಹುನ್ನಾರ, ವಿ.ಜೆ.ಮುಲ್ತಾನಿ, ಶಂಕರ ಜೋತೆನ್ನವರ, ಪ್ರಶಾಂತ ಸಣ್ಣಕ್ಕಿ ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಪಿಎಚ್‍ಸಿ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.
