ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ
ಬೆಟಗೇರಿ: ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಜು. 24 ರಿಂದ 28 ರವರೆಗೆ ಜರುಗಲಿರುವ ಪ್ರಯುಕ್ತ ಗ್ರಾಮದೇವತೆಯ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಜು. 7 ರಂದು ಸ್ಥಳೀಯ ಗ್ರಾಮದೇವತೆಯ ದ್ಯಾಮವ್ವದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಗೋಕಾಕದ ಶಿವಾಜಿ ಪಾಟೀಲ ನ್ಯೂ ಸ್ಪರ್ಧಾ ರಿಕಾರ್ಡಿಂಗ ಸ್ಟುಡಿಯೋದಲ್ಲಿ, ಮುತ್ತೆಪ್ಪ ಖನೋಜಿ ಅವರ ಪ್ರಯೋಜಿಕತ್ವ, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೇಟಗೇರಿ ಇವರ ಸಾಹಿತ್ಯದಲ್ಲಿ, ಗಾಯಕರಾದ ಶಿವಾನಂದ ಮದವಾಲ, ರಾಜೇಶ್ವರಿ ಧಾರವಾಡ, ಎಲ್. ಎನ್.ಶ್ರೀಕಾಂತ ಇವರ ಕಂಠದಲ್ಲಿ ಹಾಡಿರುವ ಸ್ಥಳೀಯ ಜಾಗೃತ ಗ್ರಾಮದೇವತೆ ದ್ಯಾಮವ್ವದೇವಿಯ ಸುಮಧುರ ಭಕ್ತಿಗೀತೆಗಳ ಧ್ವನಿಸುರುಳಿ ಬೆಟಗೇರಿ ಗ್ರಾಮದ ಸಮಸ್ತ ಗುರು ಹಿರಿಯರ ಸಹಕಾರದೊಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ರಂಗಭೂಮಿಯ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಈ ವೇಳೆ ತಿಳಿಸಿದರು.
ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇಲ್ಲಿಯ ಗ್ರಾಮದೇವತೆ ದ್ವಾಮವ್ವದೇವಿ ಜಾತ್ರಾ ಮಹೋತ್ಸವ ಆಚರಣಾ ಸಮೀತಿ ಅಧ್ಯಕ್ಷರು, ಸದಸ್ಯರು, ಬೆಟಗೇರಿ ಗ್ರಾಮದ ಸರ್ವ ಸಮುದಾಯದ ಹಿರಿಯ ನಾಗರೀಕರು, ಯುವಕರು, ಶ್ರೀ ದೇವಿ ದೇವಸ್ಥಾನದ ಅರ್ಚಕರು, ಗ್ರಾಮಸ್ಥರು ಇದ್ದರು.
IN MUDALGI Latest Kannada News