ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿವಿಧ ಸ್ಪರ್ಧೆಗಳು, ಸಾಂಸ್ಕøತಿಕ ಮತ್ತು ಸಂಗಿತ ಕಾರ್ಯಕ್ರಮ ಹಾಗೂ ಸತ್ಕಾರ ಸಮಾರಂಭ ಜುಲೈ.24 ರಿಂದ ಜುಲೈ.28ರ ತನಕ ಜರುಗಲಿದೆ.
ಜು.24ರಂದು ಮುಂಜಾನೆ 6ಗಂಟೆಗೆ ಶ್ರೀದೇವಿಯ ಗುಡಿ ಮುಂದೆ ಹಂದರ ಹಾಕುವದು, ಊರಲ್ಲಿ ಅಂಕಿತ ಹಾಕುವದು, ಸಾಯಂಕಾಲ 4 ಗಂಟೆಗೆ ಊರಿನ ಸೀಮೆಯಿಂದ ಶ್ರೀದೇವಿಯನ್ನು ಸಕಲ ವಾದ್ಯಗಳೊಂದಿಗೆ ಸ್ಥಳೀಯ ಅಡವಿಸಿದ್ದೇಶ್ವರ ದೇವಸ್ಥಾನದಲ್ಲಿ ತಂದು ಕೂಡ್ರಿಸುವದು. ರಾತ್ರಿ 10ಗಂಟೆಗೆ ಇಲ್ಲಿಯ ಶ್ರೀ ಗಜಾನನ ವೇದಿಕೆ ಮೇಲೆ ಅರ್ಜುನಗಿ ಜಿ.ವಿಜಯಪುರ ಇವರಿಂದ ಶ್ರೀ ರೇಣುಕಾ ಮಹಾತ್ಮೆ ಎಂಬ ಭಕ್ತಿ ಪ್ರಧಾನ ನಾಟಕ ಜರುಗುವದು.
ಜು.25ರಂದು ಮುಂಜಾನೆ ಗ್ರಾಮದÀ ಎಲ್ಲ ದೇವರ ಪಲ್ಲಕ್ಕಿ, ಸುಮಂಗಲೆಯರ ಕುಂಭ, ಆರತಿ ಮತ್ತು ಸಕಲ ವಾದ್ಯಮೇಳಗಳೊಂದಿಗೆ ಶ್ರೀ ಅಡವಿಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಶ್ರೀದೇವಿಯನ್ನು ಬಸ್ ನಿಲ್ದಾಣದ ಮುಖಾಂತರ ತಂದು ಗೌಡರ ಕಟ್ಟೆಗೆ ಕೂಡ್ರಿಸುವದು. ಪುರ ಜನರಿಂದ ಶ್ರೀದೇವಿಯ ಉಡಿತುಂಬುವದು ಹಾಗೂ ನೈವೇದ್ಯ ಸಮರ್ಪನೆ ನಡೆದ ಬಳಿಕ ರಾತ್ರಿ ಗೌಡರ ಮನೆಯಿಂದ ಶ್ರೀದೇವಿಯ ಹೊನ್ನಾಟ ಜರುಗಿದ ನಂತರ ಊರಿನ ಪ್ರಮುಖ ಬೀದಿಗಳ ಮುಖಾಂತರ ಶ್ರೀದೇವಿಯನ್ನು ಸ್ಥಳೀಯ ಉದ್ದಮ್ಮನ ಗುಡಿಗೆ ತಂದು ಕೂಡ್ರಿಸುವದು. ಮುಂಜಾನೆ 10ಗಂಟೆಗೆ ನಿಮಿಷದ ಬಂಡಿ ಶರ್ತು ನಡೆಯಲಿದೆ.
ಜುಲೈ.26ರಂದು ಮುಂಜಾನೆ 7 ಗಂಟೆಗೆ ಉಡಿ ತುಂಬುವ, ನೈವೇದ್ಯ ಸಮರ್ಪನೆ ನಡೆದು, ಮುಂಜಾನೆ 8 ಗಂಟೆಗೆ 5ಕಿ.ಮೀ.ಓಟದ ಸ್ಪರ್ಧೆ, 10 ಗಂಟೆಗೆ ತೆರೆಬಂಡಿ ಶರ್ತು ಜರುಗಲಿದೆ. ಸಾಯಂಕಾಲ ಶ್ರೀದೇವಿಯನ್ನು ಶ್ರೀ ಉದ್ದಮ್ಮನ ಗುಡಿಯಿಂದ ಪ್ರಮುಖ ಬೀದಿಗಳ ಮುಖಾಂತರ ಡಾ. ಅಂಬೇಡ್ಕರ್ ಸರ್ಕಲ್‍ಗೆ ತಂದು ಕೂಡ್ರಿಸುವದು, ರಾತ್ರಿ 10ಗಂಟೆಗೆ ಶ್ರೀ ದ್ಯಾಮವ್ವದೇವಿ ನಾಟ್ಯ ಸಂಘದವರಿಂದ ಗೌಡನ ದೌರ್ಜನ್ಯಕ್ಕೆ ಸಿಂಹಗರ್ಜನೆ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಜು.27ರಂದು ಡಾ.ಅಂಬೇಡ್ಕರ ಸರ್ಕಲ್ ನಲ್ಲಿ ಮುಂಜಾನೆ ಶ್ರೀದೇವಿಗೆ ನೈವೇದ್ಯ ಹಾಗೂ ಉಡಿ ತುಂಬುವ ಕಾರ್ಯಕ್ರಮದ ಬಳಿಕ ಅಂಬೇಡ್ಕರ್ ಸರ್ಕಲ್‍ದಿಂದ ಶ್ರೀದೇವಿಯನ್ನು ಪ್ರಮುಖ ಬೀದಿಗಳ ಮುಖಾಂತರ ತಂದು ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕುಡ್ರಿಸುವದು. ಮುಂಜಾನೆ 8 ಗಂಟೆಗೆ 45-55 ಎಚ್‍ಪಿ ಓಳಗಿನ ಟ್ಯಾಕ್ಟರ್-ಟ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯಲಿದೆ. ಮದ್ಯಾಹ್ನ 12 ಗಂಟೆಗೆ ಓಪನ್ ಟಗರಿನ ಕಾಳಗ, 2ಗಂಟೆಗೆ ಹಾಲಲ್ಲಿನ ಟಗರಿನ ಕಾಳಗ ಸ್ಪರ್ಧೆ, ಸಂಜೆ 7 ಗಂಟೆಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಝೀ ವಾಹಿನಿ ಕಲಾವಿದೆ ಕು.ಪ್ರಗತಿ ಬಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ, ಗೋಕಾಕ ರತಿಕಾ ನೃತ್ಯ ನಿಕೇತನ ಅವರಿಂದ ಭರತನಾಟ್ಯ, ನೃತ್ಯ, ರಾಜೇಂದ್ರ ಮತ್ತು ನರೇಂದ್ರ ಲಕಾಟಿ ಅವರಿಂದ ಯೋಗ ನೃತ್ಯ ನಡೆಯಲಿದೆ.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪ್ರತಿ ದಿನ ಮಹಾಪ್ರಾಸ ವ್ಯವಸ್ಥೆ ಇರುತ್ತದೆ. ವಿವಿಧ ಶರ್ತುಗಳಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನಗಳಿವೆ. ಸ್ಪರ್ಧೆಗಳು ನಡೆದ ದಿನವೇ ಸಾಯಂಕಾಲ 5 ಗಂಟೆಗೆ ವಿಜೇತರಾದವರಿಗೆ ಸ್ಥಳೀಯ ಶ್ರೀ ಗಜಾನನ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುವದು. ವಿವಿಧ ಸ್ಪರ್ಧೆಗಳ ಹೆಸರು ನೊಂದಾಯಿಸಲು ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9972325830, 8247044676, 9880850851, 8971270997, 9980041791
ಜು.28 ರಂದು ಮುಂಜಾನೆ 10:30ಗಂಟೆಗೆ ಹರ, ಗುರು, ಚರಮೂರ್ತಿಗಳ, ಗಣ್ಯರ, ರಾಜಕೀಯ ಮುಖಂಡರ ಭವ್ಯ ಮೆರವಣಿಗೆ ಸಕಲ ವಾದ್ಯಾಮೇಳಗಳೊಂದಿಗೆ ಅಡವಿಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಗಜಾನನ ವೇದಿಕೆ ತನಕ ನಡೆದ ಬಳಿಕ ಸತ್ಕಾರ ಸಮಾರಂಭ ಜರುಗಲಿದೆ.
ಮುಗಳಖೋಡದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಬಾಗೋಜಿಕೊಪ್ಪದ ಡಾ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ, ಮಮದಾಪೂರದ ಮೌನಮಲ್ಲಿಕಾರ್ಜುನ ಮಹಾಸ್ವಾಮಿಜಿ, ಕಡಕೋಳದ ಸಿದ್ರಾಯಜ್ಜನವರು ನೇತೃತ್ವ ವಹಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಸತ್ಕಾರ ಮೂರ್ತಿಗಳಾಗಿ, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಜಿಪಂ, ತಾಪಂ, ಗ್ರಾಪಂ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಗಣ್ಯರು, ಸಂತ-ಶರಣರು ಮುಖ್ಯತಿಥಿಗಳಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ12ಗಂಟೆಗೆ ಪುರ ಜನರಿಂದ ಶ್ರೀದೇವಿಗೆ ಉಡಿ ತುಂಬುವ ಮತ್ತು ನೈವೇದ್ಯ ಸಮರ್ಪನೆ ಕಾರ್ಯಕ್ರಮ ಜರುಗಲಿದೆ. ರಾತ್ರಿ ಶ್ರೀದೇವಿಯನ್ನು ಸೀಮೆಗೆ ಕಳುಹಿಸಲಾಗುವದು. ಜುಲೈ.28ರಂದು ಭಂಡಾರ ಆಡುವದನ್ನು ನಿಷೇದಿಸಲಾಗಿದೆ ಎಂದು ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.