ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವಕ್ಕೆ ಚಾಲನೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಜು.24ರಂದು ವೈಭವದಿಂದ ನಡೆಯಿತು.
ಮುಂಜಾನೆ 6ಗಂಟೆಗೆ ಶ್ರೀದೇವಿಯ ಗುಡಿ ಮುಂದೆ ಹಂದರ ಹಾಕುವದು, ಊರಲ್ಲಿ ಅಂಕಿತ ಹಾಕುವದು, ಸಂಜೆ ಊರಿನ ಸೀಮೆಯಿಂದ ಶ್ರೀದೇವಿಯನ್ನು ಸಕಲ ವಾದ್ಯಗಳೊಂದಿಗೆ ಸಡಗರ, ಸಂಭ್ರಮದಿಂದ ಸ್ಥಳೀಯ ಅಡವಿಸಿದ್ದೇಶ್ವರ ದೇವಸ್ಥಾನದಲ್ಲಿ ತಂದು ಕೂಡ್ರಿಸಲಾಯಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಶ್ರೀದೇವಿಯ ಭಕ್ತರು, ಗಣ್ಯರು, ಇಲ್ಲಿಯ ಗ್ರಾಮದೇವತೆ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮದೇವತೆ ದೇವಾಲಯ ಅರ್ಚಕರು, ಸ್ಥಳೀಯರು ಇದ್ದರು.
ಇಂದು ಕಾರ್ಯಕ್ರಮ ಏನು.?: ಜು.25ರಂದು ಮುಂಜಾನೆ ಗ್ರಾಮದÀ ಎಲ್ಲ ದೇವರ ಪಲ್ಲಕ್ಕಿ, ಸುಮಂಗಲೆಯರ ಕುಂಭ, ಆರತಿ ಮತ್ತು ಸಕಲ ವಾದ್ಯಮೇಳಗಳೊಂದಿಗೆ ಶ್ರೀ ಅಡವಿಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಶ್ರೀದೇವಿಯನ್ನು ಬಸ್ ನಿಲ್ದಾಣದ ಮುಖಾಂತರ ತಂದು ಗೌಡರ ಕಟ್ಟೆಗೆ ಕೂಡ್ರಿಸುವದು. ಪುರ ಜನರಿಂದ ಶ್ರೀದೇವಿಯ ಉಡಿತುಂಬುವದು ಹಾಗೂ ನೈವೇದ್ಯ ಸಮರ್ಪನೆ ನಡೆದ ಬಳಿಕ ರಾತ್ರಿ ಗೌಡರ ಮನೆಯಿಂದ ಶ್ರೀದೇವಿಯ ಹೊನ್ನಾಟ ಜರುಗಿದ ನಂತರ ಊರಿನ ಪ್ರಮುಖ ಬೀದಿಗಳ ಮುಖಾಂತರ ಶ್ರೀದೇವಿಯನ್ನು ಸ್ಥಳೀಯ ಉದ್ದಮ್ಮನ ಗುಡಿಗೆ ತಂದು ಕೂಡ್ರಿಸುವದು. ಮುಂಜಾನೆ 10ಗಂಟೆಗೆ ನಿಮಿಷದ ಬಂಡಿ ಶರ್ತು ನಡೆಯಲಿದೆ.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪ್ರತಿ ದಿನ ಮಹಾಪ್ರಾಸ ವ್ಯವಸ್ಥೆ ಇರುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಹೆಸರು ನೊಂದಾಯಿಸಲು ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9972325830, 8247044676, 9880850851, 8971270997, 9980041791 ಸಂಪರ್ಕಿಸಬೇಕೆಂದು ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.