ಬೆಟಗೇರಿ ಗ್ರಾಪಂಗೆ ಅಧ್ಯಕ್ಷೆಯಾಗಿ ತೇಜಸ್ವಿನಿ ನೀಲಣ್ಣವರ, ಉಪಾಧ್ಯಕ್ಷೆಯಾಗಿ ಸಾಂವಕ್ಕಾ ಬಾಣಸಿ ಆಯ್ಕೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಎರಡನೇಯ ಅವಧಿಗೆ ಈಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ತೇಜಸ್ವಿನಿ ರಾಮಪ್ಪ ನೀಲಣ್ಣವರ, ಉಪಾಧ್ಯಕ್ಷೆಯಾಗಿ ಸಾಂವಕ್ಕಾ ಸಿದ್ದಪ್ಪ ಬಾಣಸಿ ಆಯ್ಕೆಗೊಂಡಿದ್ದಾರೆ.
ಒಟ್ಟು 13 ಸದಸ್ಯರ ಬಲ ಹೊಂದಿದ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾದ ತೇಜಸ್ವಿನಿ ನೀಲಣ್ಣವರ ಪ್ರತಿಸ್ಪರ್ದಿ ಬಸವರಾಜ ದಂಡಿನ ಚುನಾವಣೆಗೆ ಸ್ಪರ್ದಿಸಿ, ಸಮನಾಗಿ 6 ಮತಗಳನ್ನು ಪಡೆದ ಕಾರಣ ಚೀಟಿ ಎತ್ತುವ ಮೂಲಕ ತೇಜಸ್ವಿನಿ ನೀಲಣ್ಣವರ ಅವರನ್ನು ನೂತನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷೆ ಸ್ಥಾನಕ್ಕೆ ಅಭ್ಯರ್ಥಿ ಸಾಂವಕ್ಕಾ ಸಿದ್ದಪ್ಪ ಬಾಣಸಿ ಪ್ರತಿಸ್ಪರ್ದಿ ಯಲ್ಲವ್ವ ಲಕ್ಷ್ಮಣ ಚಂದರಗಿ ಚುನಾವಣೆಗೆ ಸ್ಪರ್ದಿಸಿದ್ದರು. ಪ್ರತಿಸ್ಪರ್ದಿ ಅಭ್ಯರ್ಥಿ ಯಲ್ಲವ್ವ ಚಂದರಗಿ ಅವರ ನಾಮಪತ್ರ ತಿರಸ್ಕøತಗೊಂಡಿದ್ದರಿಂದ ನೂತನ ಉಪಾಧ್ಯಕ್ಷೆಯಾಗಿ ಸಾಂವಕ್ಕಾ ಬಾಣಸಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘುರಾಮ ಎಸ್.ಬಿ ಅವರು ಘೋಷಿಸಿದರು.
ಈ ವೇಳೆ ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ, ತಾಪಂ ಮಾಜಿ ಸದಸ್ಯರಾದ ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಪುಂಡಲೀಕ ಹಾಲಣ್ಣವರ, ಸುಭಾಷ ಕರೆಣ್ಣವರ, ಸುಭಾಷ ಜಂಬಗಿ, ಶ್ರೀಧರ ದೇಯಣ್ಣವರ, ಹನಮಂತ ವಗ್ಗರ, ರಾಮಣ್ಣ ಕತ್ತಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು, ರಾಜಕೀಯ ಮುಖಂಡರು, ಗ್ರಾಮಸ್ಥರು ಇದ್ದರು.