ಪತ್ರಿಕಾ ವಿತರಕರ ನಿತ್ಯದ ಸೇವೆ ಮೆಚ್ಚುವಂತದ್ದು:ಮಲ್ಲಪ್ಪ ಪಣದಿ
ಬೆಟಗೇರಿ: ಅನವರತ ವರ್ಷವಿಡೀ ದುಡಿಯುವ ಮತ್ತು ಅಸಂಘಟಿತ ವಲಯದಲ್ಲೇ ಶ್ರಮಿಸುತ್ತಿರುವ ಪತ್ರಿಕಾ ವಿತರಕರ ಸೇವೆ ಮೆಚ್ಚುವಂತದ್ದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗೆಳೆಯರ ಬಳಗದ ಸಂಚಾಲಕ, ಯುವ ಮುಖಂಡ ಮಲ್ಲಪ್ಪ ಪಣದಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗೆಳೆಯರ ಬಳಗ ಹಾಗೂ ಸ್ಥಳೀಯ ಗ್ರಾಮ ಒನ್ ಸೇವಾ ಕೇಂದ್ರ ಸಹಯೋಗದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ಸೆ.4ರಂದು ಸ್ಥಳೀಯ ಪತ್ರಿಕಾ ವಿತರಕ ಮತ್ತು ವರದಿಗಾರ ಅಡಿವೆಪ್ಪ ಮುಧೋಳ ಅವರನ್ನು ಶಾಲು ಹೊದಿಸಿ ಸತ್ಕರಿಸಿ ಮಾತನಾಡಿ, ಮಳೆ, ಚಳಿ ಇದ್ದರೂ ಪತ್ರಿಕಾ ವಿತರಕರ ನಿತ್ಯದ ಸೇವೆ ಮಾತ್ರ ನಿಲ್ಲದು, ಇವರ ಸೇವೆ ಶ್ಲಾಘನೀಯವಾಗಿದೆ ಎಂದರು.
ಕಲ್ಮೇಶ ಹುಬ್ಬಳ್ಳಿ, ಅರ್ಜುನ ಅಂದಾನಿ, ಬಾಳಪ್ಪ ಕನೋಜಿ, ಭೀಮನಾಯ್ಕ ನಾಯ್ಕರ, ದುಂಡಪ್ಪ ಮಾಳೇದ, ವಿಠಲ ಚಂದರಗಿ. ನಾಗಪ್ಪ ಸವತಿಕಾಯಿ, ಎ.ಜಿ.ಮುಧೋಳ, ಬಸವರಾಜ ಪಣದಿ, ಬಸಪ್ಪ ದೇಯಣ್ಣವರ, ಸ್ಥಳೀಯ ಗೆಳೆಯರ ಬಳಗ ಮತ್ತು ಗ್ರಾಮ ಒನ್ ಸೇವಾ ಕೇಂದ್ರದ ಪದಾಧಿಕಾರಿಗಳು, ಸದಸ್ಯರು, ಹಿರಿಯ ನಾಗರಿಕರು, ಯುವಕರು, ಇದ್ದರು.