ಸೆ.21ರಂದು ಬೆಟಗೇರಿ ಹಾಉಸ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2022-23ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಹನುಮಂತ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸೆ.21ರಂದು ಮುಂಜಾನೆ 11ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ.
ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ಕಾರ್ಯ ಚಟುವಟಿಕೆ, ವಾರ್ಷಿಕ ವರದಿ, ಸನ್ 2022-23ನೇ ಸಾಲಿನ ನಿವ್ಹಳ ಲಾಭದ ವಿಭಾಗಣೆ, ಇತರೆ ಸಹಕಾರ ಸಂಘಗಳಲ್ಲಿ ಸಂಘದ ಸದಸ್ಯತ್ವದ ಅನುಮೋದನೆ ಸೇರಿದಂತೆ 27 ವಿಷಯಗಳ ಕುರಿತು ಹಾಗೂ ಸಂಘದ ಸಮಗ್ರ ಪ್ರಗತಿಗಾಗಿ ಹಲವಾರು ವಿಷಯಗಳನ್ನು ಚರ್ಚಿಸಲಿದ್ದು, ಸಂಘದ ಆಡಳಿತ ಮಂಡಳಿ ಸದಸ್ಯರು, ಸರ್ವ ಸದಸ್ಯರು, ಗ್ರಾಹಕರು ಈ ಮಹಾಸಭೆಯಲ್ಲಿ ಹಾಜರಿರಬೇಕೆಂದು ಸಂಘದ
ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.