Breaking News
Home / Recent Posts / ಸದ್ಗುರುವಿನ ಪರಮೋಪಕಾರವು ಎಂದಿಗೂ ಮರೆಯುವಂತದ್ದಲ್ಲಾ : ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳು

ಸದ್ಗುರುವಿನ ಪರಮೋಪಕಾರವು ಎಂದಿಗೂ ಮರೆಯುವಂತದ್ದಲ್ಲಾ : ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳು

Spread the love

ಸದ್ಗುರುವಿನ ಪರಮೋಪಕಾರವು ಎಂದಿಗೂ ಮರೆಯುವಂತದ್ದಲ್ಲಾ : ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳು

ಬೆಟಗೇರಿ:ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ. ಸದ್ಗುರುವಿನ ಪರಮೋಪಕಾರವು ಎಂದಿಗೂ ಮರೆಯುವಂತದ್ದಲ್ಲಾ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಇಚೆಗೆ ನಡೆದ 39ನೇ ಸತ್ಸಂಗ ಸಮ್ಮೇಳನ ಸಮಾರೂಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗೆ ಇದೆ. ಗುರುವಿನ ಉಪಕಾರ ಸ್ಮರಣೆ ಬಹಳ ದೊಡ್ಡದು ಎಂದರು.


ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ ಮಾತನಾಡಿ, ದೇವರಕ್ಕಿಂತ ಗುರು ದೊಡ್ಡವನು, ವಿಶೇಷ ಚೇತನವೇ ಸದ್ಗುರುವಾಗಿದ್ದಾನೆ ಆದ್ದರಿಂದ ಗುರುವಿನ ಪರಮೋಪಕಾರ ಮರೆಯಲು ಸಾಧ್ಯವಿಲ್ಲಾ, ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿಯವರುಸಕಲ ಭಕ್ತರಿಗೆ ತಮ್ಮಲ್ಲಿರುವ ಜ್ಞಾನಾಮೃತವನ್ನು ಉಣಬಡಿಸುತ್ತಿರುವ ಸದ್ಗುರುವಾಗಿದ್ದಾರೆ ಎಂದರು.
ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ, ಮಲ್ಲಾಪೂರÀ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಹಡಗಿನಾಳದ ಮಲ್ಲೇಶ ಶರಣರು, ಗದಗದ ಶರಣೆ ಮೈತ್ರಾ ತಾಯಿಯವರಿಂದ ಗುರುವೇ ನೀ ಮಾಡಿದ ಪರಮೋಪಕಾರವು ಮರೆಯದಂತಾಯಿತೆನ್ನ ಶರೀರವಿರುವತನಕ ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
ಮದರಖಂಡಿ ಶಂಕರಯ್ಯಾ ಮಠಪತಿ ತಬಲಾ ಸಾಥ್‍ದೊಂದಿಗೆ ಶೇಗುಣ್ಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ಜರುಗಿತು. ವಿವಿಧ ಕ್ಷೇತ್ರದÀ ಸಾಧಕರಿಗೆ, ಶಾಲಾ ಮಕ್ಕಳು, ಗಣ್ಯರು, ದಾನಿಗಳಿಗೆ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸತ್ಕರಿಸಿಲಾಯಿತು,
ಬಾಕ್ಸ್ ಐಟಮ್: ಭಕ್ತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳು: ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದ ಈಶ್ವರ ದೇವರ ಗದ್ದುಗೆ ಸೆ.19 ರಂದು ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಿತು. ಪ್ರಾತ: ಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಸಂಜೆ 7 ಗಂಟೆಗೆ ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳ ಸ್ವಾಗತ ಮೆರವಣಿಗೆ ಸ್ಥಳೀಯ ಶರಣ ಸಂಪ್ರದಾಯ ಕೆಲವು ಕುಟುಂಬದವರಿಂದ ಇಂಚ¯ದ ಡಾ.ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕೀರಿಟ ಮಹಾ ಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ, ಶಿವ ಭಜನೆ, ಶಿವ ಜಾಗರಣೆ ನಡೆಯಿತು. ಸೆ.16ರಿಂದ ಐದು ದಿನಳ ಕಾಲ ಪ್ರತಿ ದಿನ ಸಂಜೆ 7:30ಕ್ಕೆ ನಾಡಿನ ಹೆಸರಾಂತ ಹಲವಾರು ಜನ ಮಹಾತ್ಮರು, ಮಹಾಸ್ವಾಮಿಜಿ, ಸಂತ ಶರಣರಿಂದ ವಿವಿಧ ವಿಷಯಗಳ ಮೇಲೆ ಸ್ಥಳೀಯ ಗಜಾನನ ವೇದಿಕೆ ಮೇಲೆ ಪ್ರವಚನ ನಡೆಯಿತು. ಸೆ.20ರಂದು ಸ್ಥಳೀಯ ಈಶ್ವರ ಭಜನಾ ಮಂಡಳಿ ವತಿಯಿಂದ ಸಕಲ ಶ್ರೀಗಳಿಗೆ ಸತ್ಕಾರ, ಮಹಾಮಂಗಲ, ಮಹಾಪ್ರಸಾದ ನಡೆದು ಈ ವರ್ಷದ ಸತ್ಸಂಗ ಸಮ್ಮೇಳನ ಸಮಾರೂಪಗೊಂಡಿತು.
ಸ್ಥಳೀಯ ಶರಣರಾದ ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ಬಸಪ್ಪ ತೋಟಗಿ, ನಿಂಗಪ್ಪ ಕಂಬಿ, ರಾಮಣ್ಣ ಮುಧೋಳ, ಬಸನಗೌಡ ದೇಯನ್ನವರ, ಗೌಡಪ್ಪ ಮೆಳೆನ್ನವರ, ಬಸವರಾಜ ನೀಲನ್ನವರ, ಈರಪ್ಪ ದೇಯಣ್ಣವರ, ಶರಣರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗಣ್ಯರು, ಸಾವಿರಾರು ಜನ ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನದ ಉದ್ಘಾಟನೆ

Spread the loveಮೂಡಲಗಿ: ದಿವಂಗತ ಸಂಗಣ್ಣಬಸವ ಸ್ವಾಮೀಜಿಗಳ ಸತತ ಪ್ರಯತ್ನದ ಫಲವಾಗಿ ಬಳೋಬಾಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಶ್ರದ್ದಾ ಕೇಂದ್ರವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ