ಹೈನುಗಾರಿಕೆ ರೈತರ ಜೀವನಾಡಿಯಾಗಿದೆ: ಸುಣಧೋಳಿ ಅಭಿನವ ಶಿವಾನಂದ ಶ್ರೀಗಳು
ಬೆಟಗೇರಿ:ಸ್ಥಳೀಯ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವಾರು ಸಹಾಯ, ಸೌಲಭ್ಯಗಳಿವೆ. ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸೆ.21ರಂದು ನಡೆದ 2022-23ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಹೈನುಗಾರಿಕೆ ರೈತರ ಜೀವನಾಡಿಯಾಗಿದೆ ಎಂದರು
ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿ ಸಂಘವು ಸನ್2022-23ನೇ ಸಾಲಿನಲ್ಲಿ 27,65,631ರೂ.ಗಳ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರ ಸದಸ್ಯರಿಗೆ ಶೇ20ರಷ್ಟು ಡಿವ್ಹಿಡೆಂಡ್, ಶೇ65ರಷ್ಟು ಒಟ್ಟು 12,87,837ರೂ.ಗಳ ಬೋನಸ್ ಸದಸ್ಯರಿಗೆ ವಿತರಿಸಲಾಗುವದು ಎಂದರು.
ಸಂಘದ ಅಧ್ಯಕ್ಷ ಹನುಮಂತ ಪಾಟೀಲ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಶೇರ ಸದಸ್ಯರು, ಗ್ರಾಹಕರು, ಗ್ರಾಮದ ಪ್ರಮುಖ ನಾಗರಿಕರ ಜೋತೆ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಸಂಘದ ಸಮಗ್ರ ಪ್ರಗತಿಯ ಕುರಿತು ಹಲವಾರು ವಿಷಯಗಳನ್ನು ಈ ವೇಳೆ ಚರ್ಚಿಸಿದರು.
ಬಹುಮಾನ ವಿತರಣೆ:ಸನ್2022-23ನೇಯ ಸಾಲಿನಲ್ಲಿ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಕಳು ಮತ್ತು ಎಮ್ಮೆ ಹಾಲು ವಿಭಾಗದಲ್ಲಿ ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನಗಳಿಗೆ ಸಂಘದ ವತಿಯಿಂದ ತ್ರಾಮದ ಹಾಂಡೆ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ಬಹುಮಾನ ರೂಪದಲ್ಲಿ ನೀಡಿ ಸನ್ಮಾನಿಸಿದರು.
ಬೆಜಿಹಾಒ ನಿರ್ದೇಶಕ ಮಲ್ಲಪ್ಪ ಪಾಟೀಲ, ಯುವ ಮುಖಂಡ ನಿಂಗಪ್ಪ ಕುರಬೇಟ, ಸವಿತಾ ಖಾನಪ್ಪಗೋಳ, ಬೆಜಿಹಾಒ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಪ್ಪ ಎಂ., ಬೆಜಿಹಾಒ ವ್ಯವಸ್ಥಾಪಕ ಡಾ.ಶ್ರೀಕಾಂತ ವ್ಹಿ.ಎನ್., ಆರ್.ಎಮ್.ತಳವಾರ, ಎಸ್.ಬಿ.ಕರಬಣ್ಣವರ, ಬೀರೇಶ ಖಿಲಾರಿ, ಡಾ.ವಿ.ಎಂ.ಕೌಜಲಗಿ, ಸಂಜೀವ ಪೂಜೇರ, ದುಂಡಪ್ಪ ಕಂಬಿ, ವಿಜಯ ಮಠದ, ರಾಚಪ್ಪ ಮುರಗೋಡ, ರಾಮಣ್ನ ದೇಯಣ್ಣವರ, ಸಿದ್ದಪ್ಪ ಬಾಣಸಿ, ರವಿ ಉಪ್ಪಾರ, ಸತ್ತೆಪ್ಪ ಹೊರಟ್ಟಿ, ಸುನಂದಾ ದೇಯಣ್ಣವರ, ರುಕ್ಮವ್ವ ಕೋಣಿ, ಉದ್ದಪ್ಪ ಆಶೆಪ್ಪಗೋಳ, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಹಾಉಸಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಶೇರ ಸದಸ್ಯರು, ಗ್ರಾಹಕರು, ಇತರರು ಇದ್ದರು.