ಪ್ರತಿಯೊಬ್ಬರೂ ಕನ್ನಡಾಭಿಮಾನ ಬೆಳಸಿಕೊಳ್ಳಬೇಕು:ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ
ಬೆಟಗೇರಿ:ಇಂದು ಪ್ರತಿಯೊಬ್ಬರೂ ಸಾಹಿತ್ಯಾಭಿರುಚಿ ಮತ್ತು ಕನ್ನಡಾಭಿಮಾನ ಬೆಳಸಿಕೊಳ್ಳಬೇಕು. ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ ದೇಶಿ ಕವಿಯಾಗಿದ್ದರು ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದÀ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಶ್ರೀ ಗಜಾನನ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ನಡೆದ ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬೆಟಗೇರಿ ಗ್ರಾಮದ ಯುವಕರು, ಕರವೇ ಸದಸ್ಯರಲ್ಲಿ ಕ್ರೀಯಾಶೀಲ ವ್ಯಕ್ತಿತ್ವ ಮತ್ತು ಒಗ್ಗಟ್ಟುತನವಿದೆ. ಸ್ಥಳೀಯರು ವಿವಿಧ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಾಯ, ಸಹಕಾರ ಮೆಚ್ಚುವಂತದ್ದಾಗಿದೆ ಎಂದರು.
ಸ್ಥಳೀಯ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಕಾಕ ಸಪಪೂ ಮಹಾವಿದ್ಯಾಲಯದ ಸಹಶಿಕ್ಷಕ ರಾಮಪ್ಪ ಮಿರ್ಜಿ ಅವರು ಡಾ.ಬೆಟಗೇರಿ ಕೃಷ್ಣಶರ್ಮರ ಕುರಿತು ಉಪನ್ಯಾಸ ನೀಡಿದರು. ಶ್ರೀಗಳನ್ನು, ಗಣ್ಯರು ಹಾಗೂ ವಿವಿಧ ವಲಯದಲ್ಲಿ ಸಾಧನೆಗೈದವರನ್ನು ಇಲ್ಲಿಯ ಕರವೇ ವತಿಯಿಂದ ಸತ್ಕರಿಸಿದ ಬಳಿಕ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ, ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ ಅವರಿಂದ ಸಂಗೀತ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿತು.
ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ಚನ್ನಬಸು ಯಕ್ಸಂಬಿ, ಗೋಕಾಕ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಸೋಮಗೌಡ್ರ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ನೀಲಣ್ಣವರ, ಮಂಜು ಪತ್ತಾರ, ಭರಮಣ್ಣ ಪೂಜೇರ, ವಿಜಯ ಹಿರೇಮಠ, ಮಾಯಪ್ಪ ಕೋಣಿ, ವೀರಭದ್ರ ದೇಯಣ್ಣವರ, ನಾಗೇಶ ಬೆಳಗಲಿ, ರಾಘು ಬೆಟಗೇರಿ, ಮಹಾದೇವ ತಪಸಿ, ಫಿರೋಜ್ ಮಿರ್ಜಾನಾಯ್ಕ, ಈರಣ್ಣ ದಂಡಿನ, ಬಸವರಾಜ ಗುದಗಾಪೂರ, ಗಿರೀಶ ಗಾಣಗಿ, ಶಿವು ನಾಯ್ಕರ, ಕಾರ್ತಿಕ ತೆರದಾಳ, ಪ್ರದೀಪ ಪತ್ತಾರ, ಸುಭಾಷ ರಡರಟ್ಟಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಕನ್ನಡಪರ ಹೋರಾಟಗಾರರು, ಸಾಹಿತಿ-ಶರಣರು, ವಿವಿಧ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಸ್ಥಳೀಯ ಕರವೇ ಪದಾಧಿಕಾರಿಗಳು, ಸದಸ್ಯರು, ಕನ್ನಡಾಭಿಮಾನಿಗಳು, ಗ್ರಾಮಸ್ಥರು ಇದ್ದರು.