ಬೆಟಗೇರಿಯಲ್ಲಿ ವೀರಭದ್ರೇಶ್ವರ ಜಯಂತಿ ಆಚರಣೆ
ಬೆಟಗೇರಿ:ಗೋಕಾಕ ತಾಲೂಕಿನ ಸುಕ್ಷೇತ್ರ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ವೀರಭದ್ರೇಶ್ವರ ಜಯಂತಿ ಆಚರಣೆ ಕಾರ್ಯಕ್ರಮ ಸೆ.3ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ.
ಸೆ.3ರಂದು ಬೆಳಗ್ಗೆ 6ಗಂಟೆಗೆ ಸ್ಥಳೀಯ ವೀರಭದ್ರೇಶ್ವರ ದೇವಾಲಯದ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಬಳಿಕ ವೀರಭದ್ರೇಶ್ವರ ಜಯಂತಿ ಆಚರಣೆ, ಪುರಜನರಿಂದ ಪೂಜೆ, ನೈವೇದ್ಯ ಸಮರ್ಪನೆ, ಮಹಾಪ್ರಸಾದ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು ಸಾನಿಧ್ಯ, ಸಮ್ಮುಖ, ನೇತೃತ್ವ ವಹಿಸಲಿದ್ದಾರೆ. ಗಣ್ಯರು, ಪುರವಂತರು, ವೀರಭದ್ರೇಶ್ವರ ಪರಮಭಕ್ತರು, ಮುಖ್ಯಅತಿಥಿಗಳಾಗಿ, ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಇಲ್ಲಿಯ ವೀರಭದ್ರೇಶ್ವರ ಜಯಂತಿ ಆಚರಣೆ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.