ಬೆಟಗೇರಿ:ಸಕಲ ಶ್ರೀಗಳಿಂದ ನಡೆದ40ನೇ ಸತ್ಸಂಗ ಸಮ್ಮೇಳನ
*ಪ್ರತಿ ದಿನ ಸಂಜೆ 7:30ಕ್ಕೆ ಸಕಲ ಮಹಾತ್ಮರಿಂದ ಪ್ರವಚನ*
ದಾನಿಗಳಿಗೆ ಸತ್ಕಾರ* ಮಹಾಪ್ರಸಾದ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 40ನೇ ಸತ್ಸಂಗ ಸಮ್ಮೇಳನ ಇದೇ ಸೆ. 6 ರಿಂದ ಸೆ.10 ತನಕÀ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ.
ಸೆ.6ರಿಂದ ಸೆ.8ರ ತನಕ ಸಂಜೆ 7:30ಕ್ಕೆ ನಾಡಿನ ಸಕಲ ಮಹಾತ್ಮರು, ಶರಣರು, ಹರ, ಗುರು, ಚರಮೂರ್ತಿಗಳಿಂದ ಪ್ರವಚನ ಕಾರ್ಯಕ್ರಮ ಕೆಲ ಶ್ರೀಗಳಿಗೆ ಭಕ್ತರಿಂದ ತುಲಾಭಾರ ಸೇವೆ ನಡೆಯಿತು.
ಸೆ.9 ರಂದು ಪ್ರಾತ: ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ರಾತ್ರಿ 8 ಗಂಟೆಗೆ ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಘನ ಅಧ್ಯಕ್ಷತೆಯಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಹಳಕಟ್ಟಿಯ ನಿಜಗುಣ ಸ್ವಾಮಿಜಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ (ಅಸುಂಡಿ), ಹುಣಶ್ಯಾಳ(ಪಿ.ಜಿ) ನಿಜಗುಣ ದೇವರು, ಮಲ್ಲಾಪೂರÀ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಗದಗದ ಶರಣೆ ಮೈತ್ರಾ ತಾಯಿಯವÀರು, ಹಡಗಿನಾಳದ ಮಲ್ಲೇಶ ಶರಣರಿಂದ ಸಾಧು ಸಮಾಗಮನಾದಿಗಳಿಂದ ಸಾಧಿತಮಾದುದು ಪುಣ್ಯದ ವೃಂದ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಸ್ಥಳೀಯ ಶರಣ ಈರಪ್ಪ ದೇಯನ್ನವರ ಮತ್ತು ಕುಟುಂಬವರಿಂದ, ಶರಣೆ ಗೌರವ್ವ ದೇಯನ್ನವರ ಮತ್ತು ಕುಟುಂಬದವರಿಂದ ಹಾಗೂ ಶರಣೆ ಕಮಲವ್ವ ಪೇದನ್ನವರ ಮತ್ತು ಮಕ್ಕಳಿಂದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕಿರೀಟ ಮಹಾಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ, ಮದರಖಂಡಿ ಶಂಕರಯ್ಯ ಮಠಪತಿ ತಬಲಾ ಸಾಥ್‍ದೊಂದಿಗೆ ಶೇಗುಣಿಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ, ಶರಣೆ ಮಲ್ಲವ್ವ ಪಡಶೆಟ್ಟಿ ಹಾಗೂ ಮಕ್ಕಳಿಂದ ಮಹಾಪ್ರಸಾದ ಸೇವೆ ನಡೆಯಲಿದೆ.
ಸೆ.10 ರಂದು ಮುಂಜಾನೆ 10 ಗಂಟೆಗೆ ಸಮ್ಮೇಳನದಲ್ಲಿ ಉಪಸ್ಥಿತರಿರುವ ಸಕಲ ಮಹಾತ್ಮರಿಂದ ಸಾಧರದಿ ಜೀವರಿಗೆ ಬೋಧವನು ಮಾಡುವದಕೆ ಸಾಧುರೂಪದಿಂದ ಮೇದಿನಿಗೆ ತಾ ಬಂದ ಆರೂಢ ಎಂಬ ವಿಷಯದ ಮೇಲೆ ಪ್ರವಚನ ನಡೆದು, ಸಾಧಕರಿಗೆ, ದಾನಿಗಳಿಗೆ ಸತ್ಕಾರ, ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಳ್ಳಲಿದೆ ಎಂದು ಇಲ್ಲಿಯ ಈಶ್ವರ ಭಜನಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.