Breaking News
Home / ಬೆಳಗಾವಿ / ಮಮದಾಪೂರದ ಮೌನಮಲ್ಲಿಕಾರ್ಜುನ ಶಿವಯೋಗಿಗಳು ಒಬ್ಬ ಶ್ರೇಷ್ಠ ಮಹಾತ್ಮ ಮತ್ತು ಮಹಾನ್ ಶಿವಯೋಗಿಯಾಗಿದ್ದಾರೆ ಎಂದು ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ

ಮಮದಾಪೂರದ ಮೌನಮಲ್ಲಿಕಾರ್ಜುನ ಶಿವಯೋಗಿಗಳು ಒಬ್ಬ ಶ್ರೇಷ್ಠ ಮಹಾತ್ಮ ಮತ್ತು ಮಹಾನ್ ಶಿವಯೋಗಿಯಾಗಿದ್ದಾರೆ ಎಂದು ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ

Spread the love

ಬೆಟಗೇರಿ:ಮಮದಾಪೂರದ ಮೌನಮಲ್ಲಿಕಾರ್ಜುನ ಶಿವಯೋಗಿಗಳು ಒಬ್ಬ ಶ್ರೇಷ್ಠ ಮಹಾತ್ಮ ಮತ್ತು ಮಹಾನ್ ಶಿವಯೋಗಿಯಾಗಿದ್ದಾರೆ ಎಂದು ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.

ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಶಿವಯೋಗಿಗಳ ಮಠದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ.17ರಂದು ನಡೆದ ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು ಶಿರಹಟ್ಟಿ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮಾಸಿಕ ಶಿವಾನುಭವ ಹಾಗೂ ಪುರಾಣ ಮಂಗಲೋತ್ಸವ ಧರ್ಮಸಭೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮೌನಮಲ್ಲಿಕಾರ್ಜುನ ಶಿವಯೋಗಿಗಳ ಜೋತೆ ಭಕ್ತರ ಭಕ್ತಿ, ಅವಿನಾಭಾವ ಸಂಬಂಧದ ಕುರಿತು ಶ್ಲಾಘಿಸಿದರು.


ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿದ ಶ್ರೀದೇವಿ ಮಹಾನ್ ಶಕ್ತಿ ದೇವತೆÉಯಾಗಿದ್ದಾಳೆ. ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನ ಮುಕ್ತ ಎಂದು ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.
ಮಮದಾಪುರದ ಶ್ರೀಮಠದ ಶರಣರಾದ ಮಂಜುನಾಥ ಶರಣರು ಪ್ರವಚನದಲ್ಲಿ ಮಾತನಾಡಿ, ಒಬ್ಬ ಜೀವನ್ಮುಕ್ತ ಯೋಗಿ ಅಥವಾ ಗುರುವಿನ ದರ್ಶನವಾದ ನಂತರ ಗುಡಿಗುಂಡಾರಗಳ ಅವಶ್ಯಕತೆ ಇಲ್ಲಾ, ಆ ಗುರುವಿನಿಂದಲೇ ನಮಗೆ ಸದ್ಗತಿ ದೊರಕುವುದು ಎಂದರು.
ಇಲ್ಲಿಯ ಮೌನ ಮಲ್ಲಿಕಾರ್ಜುನ ಮಠದ ಮೌನಮಲ್ಲಿಕಾರ್ಜುನ ಶಿವಯೋಗಿಗಳು ಅಧ್ಯಕ್ಷತೆ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿ, ಚುಳಕಿ ಮಠದ ಶೇಖರಯ್ಯ ಸ್ವಾಮಿಜಿ ನೇತೃತ್ವ, ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಅತಿಥಿಗಳಾಗಿ ಹಾಗೂ ಆಗಮಿತ ನಾಡಿನ ಸಕಲ ಹರ-ಗುರು, ಚರಮೂರ್ತಿಗಳ ಸಮ್ಮುಖ ವಹಿಸಿ ಪ್ರವಚನ ನೀಡಿದರು.
ವೈಭವದಿಂದ ನಡೆದ ವಿವಿಧ ಕಾರ್ಯಕ್ರಮ: ಶ್ರೀದೇವಿ ಪುರಾಣ ಮಂಗಲೋತ್ಸವ ಪ್ರಯುಕ್ತ ಅ.17ರಂದು ಸಾಯಂಕಾಲ 4ಗಂಟೆಗೆ ಮಮದಾಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಆರತಿ, ಕುಂಭ, ಜಾನಪದ ವಿವಿಧ ಕಲಾತಂಡ ಹಾಗೂ ಸಕಲ ವಾಧ್ಯಮೇಳಗಳೊಂದಿಗೆ ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ಜರುಗಿದ ಬಳಿಕ ಮಂಗಲ ಧರ್ಮಸಭೆ ನಡೆಯಿತು. ಲಕ್ಷ್ಮೀ ಒಡೆಯರ ಮತ್ತು ಭರತನಾಟ್ಯ ಶಾಲಾ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕರಡಿಗುದ್ದಿ ಶರಣ ವಿರುಪಾಕ್ಷ ರಾಚಣ್ಣವರ ಹಾಗೂ ಸಹೋದರರು ಅನ್ನ ದಾಸೋಹ ಸೇವೆ ನೆರವೇರಿಸಿದರು. ಸಮಾರಂಭಕ್ಕೆ ಆಗಮಿತ ಹರ, ಗುರು, ಚರಮೂರ್ತಿಗಳನ್ನು, ಉನ್ನತ ಶಿಕ್ಷಣದ ಸಾಧಕ ವಿದ್ಯಾರ್ಥಿ ಪ್ರವೀಣ ಹತಪಾಕಿ ಸೇರಿದಂತೆ ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಂತ-ಶರಣರು, ಗಣ್ಯರು, ಶ್ರೀಮಠದ ಭಕ್ತರು, ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ