ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವರ ಜಾತ್ರಾಮಹೋತ್ಸವ ಇದೇ ಅ.29ರಿಂದ ಅ.30ರ ವರೆಗೆ ಎರಡು ದಿನಗಳ ಕಾಲ ನಡೆಯಲಿದೆ.
ಅ.29 ರಂದು ಬ್ರಾಹ್ಮಿ ಮುಹೂರ್ತ ಬೆಳಿಗ್ಗೆ 5 ಗಂಟೆಗೆ ಶ್ರೀ ದುರ್ಗಾದೇವಿ ದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಸಾಯಂಕಾಲ 5 ಗಂಟೆಗೆ ಪುರದೇವರ ಪಲ್ಲಕ್ಕಿಗಳ ಆಗಮನ, ಸುಮಂಗಲೆಯರಿಂದ ಆರತಿ ಸಕಲ ವಾಧ್ಯಮೇಳಗಳೊಂದಿಗೆ ಪಲ್ಲಕ್ಕಿ ಬರಮಾಡಿಕೊಳ್ಳುವ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಯಡಹಳ್ಳಿ ಗಜಾನನ ಮಹಿಳಾ ಗಾಯನ ಸಂಘ ಹಾಗೂ ಮುಧೋಳ ಸರಸ್ವತಿ ಗಾಯನ ಮಹಿಳಾ ಸಂಘದವರಿಂದ ಹರದೇಶಿ-ನಾಗೇಶಿ ಚೌಡಕಿ ಪದಗಳ ಗಾಯನ ನಡೆಯಲಿದೆ.
ಅ.30 ರಂದು ಬೆಳಿಗ್ಗೆ 6 ಗಂಟೆಗೆ ಸ್ಥಳೀಯ ದುರ್ಗಾದೇವಿ ದೇವರ ಗದ್ದುಗೆಗೆ ಪೂಜೆ, ನೈವೇದ್ಯ ಸಮರ್ಪನೆ, ಮುಂಜಾನೆ 8 ಗಂಟೆಗೆ ಪಲ್ಲಕ್ಕಿ ಉತ್ಸವದ ಬಳಿಕ 10 ಗಂಟೆಗೆ ಮಹಾಪ್ರಸಾದ ನಡೆಯಲಿದೆ. ಸ್ಥಳೀಯ ಯಲ್ಲಾಲಿಂಗ ಮಠದ ಆವರಣದಲ್ಲಿ ಮುಂಜಾನೆ 10 ಗಂಟೆಗೆ ಹಾಲಲ್ಲಿ, ನಾಲ್ಕಲ್ಲಿ ಹಾಗೂ ಓಪನ್ ಟಗರಿನ ಕಾಳಗ ಸ್ಫರ್ಧೆ, ವಿವಿಧ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಜರುಗಲಿದೆ. ದುರ್ಗಾದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ಪ್ರಾಯೋಜಕತ್ವದಲ್ಲಿ ಆಕಷರ್Àಕ ನಗದು, ಡಾಲ್ ಸೇರಿದಂತೆ ಬಹುಮಾನಗಳನ್ನು ನೀಡಲಿದ್ದಾರೆ. ಸಾಯಂಕಾಲ 5 ಗಂಟೆಗೆ ಶ್ರೀದುರ್ಗಾದೇವಿ ಮತ್ತು ಪುರ ದೇವರ ಎಲ್ಲ ಪಲ್ಲಕ್ಕಿ ಪೂಜೆ ನಡೆಯಲಿದೆ.
ನಂತರ ಬಂಡಾರ ಒಡೆಯುವ ಕಾರ್ಯಕ್ರಮ ಜರುಗಿ ಜಾತ್ರಾ ಮಹೋತ್ಸವ ಸಮಾರೂಪಗೊಳ್ಳಲಿದೆ. ಟಗರಿನ ಕಾಳಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮೊ.ನಂ.8861246872, 9741267931, 9980041791ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕು ಎಂದು ಇಲ್ಲಿಯ ದುರ್ಗಾದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಮಾಯಪ್ಪ ಬಾಣಸಿ, ಸಂಚಾಲಕ ಸದಾಶಿವ ಕುರಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.
