ಕನ್ನಡ ನಾಡಿನ ಕಲೆ, ಸಾಹಿತ್ಯ ಸಂಸ್ಕøತಿ ಜಗತ್ತಿನಲ್ಲಿ ಶ್ರೇಷ್ಠವಾಗಿದೆ: ಈರಣ್ಣ ಬಳಿಗಾರ
ಬೆಟಗೇರಿ: ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಸಹಯೋಗದಲ್ಲಿ ನ.1ರಂದು ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಸಾಹಿತ್ಯ, ಕಲೆ, ಭಾಷೆ, ಸಂಸ್ಕøತಿ, ಸಂಪ್ರದಾಯ, ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಎಂದರು.
ವಿಜಯ ಹಿರೇಮಠ ಸಾನಿಧ್ಯ ವಹಿಸಿ ಭುವನೇಶ್ವರಿ ದೇವಿ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಬಸವಂತ ಕೋಣಿ, ಹನುಮಂತ ವಗ್ಗರ, ರಾಮಣ್ಣ ಕತ್ತಿ, ಭರಮಣ್ಣ ಪೂಜೇರ, ಫೀರೋಜ್ ಮಿರ್ಜಾನಾಯ್ಕ, ಬಸವರಾಜ ಪಣದಿ, ಈರಪ್ಪ ದಂಡಿನ, ಶಿವರುದ್ರ ದಂಡಿನ, ವೀರಭದ್ರ ದೇಯಣ್ಣವರ, ಮಲ್ಲಪ್ಪ ಪಣದಿ, ವಿಠಲ ಚಂದರಗಿ, ರಾಮಣ್ಣ ಬಳಿಗಾರ, ಸುಭಾಷ ಹಾವಾಡಿ, ಸೇರಿದಂತೆ ಕನ್ನಡ ಪರ ಹೋರಾಟಗಾರರು, ಕರವೇ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.