ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.9ರಂದು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಅದ್ಧೂರಿಯಾಗಿ ಜರುಗಿತು.
ಗ್ರಾಮದ ವಿವಿಧ ವೃತ್ತದಲ್ಲಿರುವ ಪುತ್ಥಳಿಗಳಿಗೆ ಪೂಜೆ, ಪುಷ್ಪಾರ್ಪಣೆ ಸಮರ್ಪಣೆ ಸ್ಥಳೀಯ ಕರವೇ ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಬಳಿಕ ಇಲ್ಲಿಯ ಅಶ್ವಾರೂಢ ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿವಿಧ ರೂಪಕಗಳ, ಜಾನಪದ ಕಲಾತಂಡಗಳು ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ಭುವನೇಶ್ವರಿ ದೇವಿಯ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಸ್ಥಳೀಯ ಪುಟ್ಟ ಬಾಲಕ ಮತ್ತು ಬಾಲಕಿಯರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ರೂಪಕಗಳ ವೇಷ ಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಬೆಟಗೇರಿ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಮುಖಂಡರಾದ ಲಕ್ಷ್ಮಣ ನೀಲನ್ನವರ, ಲಕ್ಷ್ಮಣ ಚಂದರಗಿ, ಯಲ್ಲಾಲಿಂಗ ದೇಯಣ್ಣವರ, ಮಲ್ಲಿಕಾರ್ಜುನ ಸೋಮಗೌಡ್ರ, ರಮೇಶ ಅಳಗುಂಡಿ, ಲಖನ ಚಂದರಗಿ, ಈರಣ್ಣ ಸಿದ್ನಾಳ, ಕುಲಗೋಡ ಪೊಲೀಸ್ ಠಾಣೆ ಬೆಟಗೇರಿ ಬೀಟ್ ಪೊಲೀಸ್ ಪೇದೆ ಮಹೇಶ ಲದ್ದಿ, ಬಸಪ್ಪ ತೋಟಗಿ, ರಫೀಕ್ ಮಿರ್ಜಾನಾಯ್ಕ, ಕುಲಗೋಡ ಪೊಲೀಸ್ ಠಾಣೆ ಪೊಲೀಸ್ ಪೇದೆಗಳು, ಸ್ಥಳೀಯ ಕನ್ನಡ ಪರ ಹೋರಾಟಗಾರರು, ಗಣ್ಯರು, ಗ್ರಾಪಂ ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಯುವಕರು, ಕರವೇ ಪದಾಧಿಕಾರಿಗಳು, ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Check Also
ಕಲಾರಕೊಪ್ಪ ಚಾಮುಂಡೇಶ್ವರಿ ಜಾತ್ರೆಯಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love ಗೋಕಾಕ: ಅರಭಾವಿ ಕ್ಷೇತ್ರವು ಕಳೆದ ೨೦ ವರ್ಷಗಳಿಂದ ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದು, ಕಲಾರಕೊಪ ಗ್ರಾಮವೂ …