ಬೆಟಗೇರಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ
ಈ ಸಲ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯುವುದೇ ?
ವರದಿ*ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಇದೇ ನ.28 ರಿಂದ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಪ್ರಾರಂಭದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ಆರಂಭದ ದಿನ ನ.29ನೇ ತಾರೀಖು ಇನ್ನೂ ಎಂಟ್ಬುತ್ತು ದಿನ ಬಾಕಿ ಇರುವಾಗಲೇ ತೆರೆಮರೆಯಲ್ಲಿ ತುರುಸಿನ ಚುನಾವಣೆಯ ಅಖಾಡ ಸಜ್ಜಾಗುತ್ತಿದೆ.
ಬೆಟಗೇರಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಒಟ್ಟು 12 ಸ್ಥಾನಗಳ ಸದಸ್ಯರ ಆಯ್ಕೆಗಾಗಿ ಇದೇ ನ.28ರಿಂದ ಡಿ.14ರವರೆಗೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಸಂಘದ ಕಾರ್ಯಾಲಯದಲ್ಲಿ ನಡೆಯಲಿವೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಸುತ್ತಿರುವ ಸಹಕಾರ ಇಲಾಖೆಯ ಎಸ್.ಬಿ.ಬಿರಾದಾರ ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸನ್ 1917 ಜೂನ್ 5 ರಂದು ಗ್ರಾಮ ಸೇವಾ ಸಹಕಾರಿ ಸಂಘ ಅಂತಾ ಸ್ಥಾಪನೆಗೊಂಡು, ವ್ಯವಸಾಯ ಸೇವಾ ಸಹಕಾರಿ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೀಗೆ ಕೆಲವು ನಾಮಾಂಕಿತಗಳಿಂದ ಬದಲಾವಣೆ ಹೊಂದುತ್ತಾ ಶತಮಾನ ಪೂರೈಸಿದ ಈ ಸಂಘ ಈಗ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ತನ್ನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಕೇವಲ ಮೂರು ಸಲ 1985, 1999, 2014ರಲ್ಲಿ ಮಾತ್ರ ತುರುಸಿನ ಚುನಾವಣೆ ನಡೆದು, 2019ರಲ್ಲಿ ಮತ್ತೆ ಅವಿರೂಧ ಆಯ್ಕೆ ನಡೆದಿತ್ತು, ಇನ್ನೂಳಿದ ಪ್ರತಿ 5ವರ್ಷ ಅವಧಿಗೆ ಹೆಚ್ಚು ಸಲ ಆಡಳಿತ ಮಂಡಳಿ ಸದಸ್ಯರು ಅವಿರೋಧ ಆಯ್ಕೆ ಮೂಲಕ ಆಯ್ಕೆಗೊಂಡಿದ್ದು ಇತಿಹಾಸವೇ ಸರಿ!
ಇಲ್ಲಿಯ ಪ್ರಬಲ ಅಭ್ಯರ್ಥಿ, ಯುವಕರನ್ನು ತಮ್ಮ ಗುಂಪುಗಳತ್ತ ಸೆಳೆಯಲು ತೆರೆಮರೆಯಲ್ಲಿ ಸ್ಥಳೀಯ ಎರಡು ರಾಜಕೀಯ ಗುಂಪುಗಳ ಮುಖಂಡರು ಭಾರಿ ಕಸರತ್ತು ಒಂದಡೆ ನಡೆದಿದ್ದರೆ, ಇನ್ನೂಂದಡೆ ಯುವಕರ ಗುಂಪಿನ ಸ್ಥಳೀಯ ಹಲವಾರು ಯುವ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕಿಳಿಯಲು ತುದಿಗಾಲಲ್ಲಿ ನಿಂತಿರುವ ಲಕ್ಷಣಗಳು ಗೊಚರಿಸುತ್ತಿವೆ. ಈ ಭಾರಿ ಪಕ್ಕಾ ಅವಿರೂಧ ಆಯ್ಕೆ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ, ತುರುಸಿನ ತ್ರಿಕೋನ ಸ್ಪರ್ಧೆಯ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಈ ಸಲ ಅವಿರೂಧ ಆಯ್ಕೆ ನಡೆಯುವುದೇ? :ಗ್ರಾಮದ ವಿಪಾಗ್ರಾಕಸ ಸಂಘದ 5 ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ಘೋಷಣೆಯಾದ ಪ್ರಯುಕ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಸ್ಥಳೀಯ ಎರಡು ರಾಜಕೀಯ ಗುಂಪುಗಳ ಮಧ್ಯ ತೀವ್ರ ಪೈಪೊಟಿ ಏರ್ಪಡುವ ಚುನಾವಣೆಯ ಅಖಾಡ ಸಜ್ಜಾಗುತ್ತಿದೆ. ಇನ್ನೂಂದಡೆ ಯುವಕರ ಗುಂಪೂಂದೂ ಈ ಸಲ ಚುನಾವಣಾ ಸ್ಪರ್ಧೆಗಿಳಿಯಲು ತೆರೆಮರೆಯಲ್ಲಿ ತವಕಿಸುತ್ತಿದೆ. ಹೀಗಾಗಿ ಈ ಭಾರಿ ಆಡಳಿತ ಮಂಡಳಿಗೆ ಸದಸ್ಯರು ಅವಿರೂಧÀವಾಗಿ ಆಯ್ಕೆಗೊಳ್ಳುತ್ತಾರೆ? ಇಲ್ಲವೇ ಚುನಾವಣಾ ಅಖಾಡಕ್ಕಿಳಿದು ಅಭ್ಯರ್ಥಿಗಳು ಆಯ್ಕೆಗೊಳ್ಳುತ್ತಾರೆಯೇ! ಅಂಬುವದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ಶತಮಾನ ಪೂರೈಸಿದ ಗ್ರಾಮದ ವಿಪಾಗ್ರಾಕಸ ಸಂಘದ ಸಮಗ್ರ ಅಭಿವೃದ್ಧಿ ಹಿತದೃಷ್ಠಿಯಿಂದ ಇಲ್ಲಿಯ ರಾಜಕೀಯ ಮುಖಂಡರು, ಯುವಕರು ಎಲ್ಲ ಸಮುದಾಯದ ಹಿರಿಯ ನಾಗರಿಕರ ಜೋತೆ ಚುನಾವಣೆ ಸಾಧಕ-ಭಾದಕಗಳ ಕುರಿತು ಚರ್ಚಿಸಿ ಎಲ್ಲರ ಒಮ್ಮತದಂತೆ ಈ ಸಲ ಸಂಘದ ಆಡಳಿತ ಮಂಡಳಿ ಸದಸ್ಯರ ಮತ್ತು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಸಹ ಅವಿರೂಧವಾಗಿ ಮಾಡಬೇಕೆಂಬುವುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ.
ಸಂಘದ ಆಡಳಿತ ಮಂಡಳಿ ಸದಸ್ಯರು ಈ ಸಲ ಅವಿರೂಧವಾಗಿ ಆಯ್ಕೆಗೊಳ್ಳುತ್ತಾರೇ? ಇಲ್ಲವೇ ಚುನಾವಣೆ ಸ್ಪರ್ಧೆಗಿಳಿದು ಆಯ್ಕೆಗೊಳ್ಳುತ್ತಾರೂ ಅಂಬುದನ್ನು ಕಾದುನೋಡಬೇಕಷ್ಟೇ.!!