ಬೆಟಗೇರಿ:ಪ್ರತಿಯೊಬ್ಬ ಮನುಷ್ಯನು ಪರೋಪಕಾರ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು. ಹಬ್ಬ-ಹರಿ ದಿನಗಳು, ಜಾತ್ರಾ ಮಹೋತ್ಸವ, ನಮ್ಮ ನಾಡಿನ ಸಂಸ್ಕøತಿ, ಸಂಪ್ರದಾಯದ ಪ್ರತೀಕವಾಗಿವೆ ಎಂದು ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆ.23ರಂದು ನಡೆದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ಸತ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಸ್ಥಳೀಯರು ನೀಡುತ್ತಿರುವ ಸಹಾಯ, ಸಹಕಾರವನ್ನು ಶ್ಲಾಘಿಸಿದರು.
ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಸಮ್ಮುಖ ವಹಿಸಿ ಮಾತನಾಡಿದರು. ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ, ವಿಜಯ ಹಿರೇಮಠ ನೇತೃತ್ವ ವಹಿಸಿದ್ದರು.
ಭಕ್ತಿಯ ಪರಾಕಷ್ಟೇ ಮೆರೆದ ಪುರವಂತರು : ೀರಭದ್ರೇಶ್ವರ ದೇವರ ಭಕ್ತರಾದ ಪುರವಂತರು ಪುರವಂತಿಕೆಯ ವೇóಷÀ-ಭೂಷಣ ಧರಿಸಿ ಆಹಾ..ಹಾ..ವೀರಾ.., ಆಹಾ..ಹಾ..ರುದ್ರಾ.., ಕಡೆ..ಕಡೆ… ಅಂತಾ ತಮ್ಮ ಗಲ್ಲ, ನಾಲಿಗೆಯಲ್ಲಿ ಶಸ್ತ್ರಗಳನ್ನು ಚುಚ್ಚಿ ಕೊಳ್ಳುವದು ರುದ್ರಾವೇಶದಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವದು, ಸೊಜಿಯಿಂದ ಶಸ್ತ್ರದ ಜೋತೆಗೆ ಸುಮಾರು 105 ಮೀಟರ ಉದ್ದದ ಶಸ್ತ್ರದಾರವನ್ನು ನಾಲಿಗೆ, ಒಂದು ಗಲ್ಲದಿಂದ ಮತ್ತೊಂದಡೆ ತಗೆದು ಪುರವಂತರು ಭಕ್ತಿಯ ಪರಾಕಷ್ಟೇ ಮೆರೆದರು.
ಶನಿವಾರ ಆ.21ರಂದು ಬೆಳಗ್ಗೆ, ಸಂಜೆ 6 ಗಂಟೆಗೆ ಸ್ಥಳೀಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಪೂಜೆ, ರಾತ್ರಿ ಶಿವಜಾಗರಣೆ, ಭಜನೆ ಜರುಗಿತು. ಆ.22 ರಂದು ಬೆಳಗ್ಗೆ 6 ಗಂಟೆಗೆ ಇಲ್ಲಿಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು, ಆ.23ರಂದು ಮುಂ.8 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರತಿ, ಕುಂಭಮೇಳ, ಕರಡಿ ಮಜಲು, ಸಕಲ ವಾದ್ಯಮೇಳ, ಪುರವಂತರಿಂದ ವೀರಭದ್ರೇಶ್ವರರ ಒಡಪು ಹೇಳುವದರೊಂದಿಗೆ ವೀರಭದ್ರೇಶ್ವರ ದೇವರ ಹಾಗೂ ಭದ್ರಕಾಳಿ ಮಾತೆಯ ಕಂಚಿನ ಮೂರ್ತಿಗಳ ಪಲ್ಲಕ್ಕಿ ಉತ್ಸವ ನಡೆದ ಬಳಿಕ ಪುರಜನರಿಂದ ಪೂಜೆ, ನೈವೇದ್ಯ ಸಮರ್ಪನೆ, ಗಣ್ಯರಿಗೆ ಸತ್ಕಾರ, ಮಹಾಮಂಗಲ, ಮಹಾಪ್ರಸಾದ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಇಲ್ಲಿಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ರಾಜಕೀಯ ಮುಖಂಡರು, ಸಂತ ಶರಣರು, ಪುರವಂತರು, ಮಹಿಳೆಯರು, ಭಕ್ತರು, ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
