ಬೆಟಗೇರಿ:ಕರೊನಾ ಸೋಂಕಿನ ಭೀತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಸರ್ಕಾರದ ನಿರ್ದೇಶನದಂತೆ ಆರಂಭವಾದ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಭವ್ಯ ಸ್ವಾಗತ ಕೋರುವ

ಕಾರ್ಯಕ್ರಮ ಸೋಮವಾರ ಆ.23 ರಂದು ನಡೆಯಿತು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಮಾತನಾಡಿ, ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ನಿಯಮಗಳನ್ನು ಶಾಲಾ ಮಕ್ಕಳಿಗೆ ತಿಳಿಸಿದರು. ಶಾಲಾ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿಕೊಳ್ಳಲಾಯಿತು. ಶಾಲಾ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಮತ್ತು ಭಾರತಾಂಬೆ ಮೂರ್ತಿಗಳಿಗೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಶಾಲಾ ಮಕ್ಕಳಿಗೆ ಹಾಲಿನ ಪಾಕೀಟ್‍ಗಳನ್ನು ವಿತರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳನ್ನು ಭವ್ಯ ಸ್ವಾಗತ ಕೊರಲು ಪ್ರೌಢ ಶಾಲೆಯ ಪ್ರವೇಶಕ್ಕೆ ತಳಿರು ತೋರಣ, ಸ್ವಾಗತ ಕೊರುವ ಬ್ಯಾನರ್, ಅಲ್ಲಲ್ಲಿ ಮಕ್ಕಳಲ್ಲಿ ಉತ್ಸಾಹ ತುಂಬಲು ಬರೆದ ಬರಹಗಳು ಶಾಲಾ ಕೊಠಡಿಗಳ ಪ್ರವೇಶ ದಾರಿಯುದ್ದಕ್ಕೂ ರಾರಾಜಿಸಿದವು. ಶಾಲಾ ಆರಂಭದ ಇಂದಿನ ದಿನ ಇಲ್ಲಿಯ ಶಾಲಾ ಮಕ್ಕಳಲ್ಲಿ ನವೂತ್ಸಾಹ ತುಂಬುವಂತೆ ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕ ವೃಂದ ವಿಭಿನ್ನವಾಗಿ ಸ್ವಾಗತ ಕೊರುವ ಕಾರ್ಯ ಕೈಗೊಂಡಿದ್ದರು. ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಶಾಲಾ ಆರಂಭಕ್ಕೆ ಹರ್ಷ ವ್ಯಕ್ತಪಡಿಸಿದರು.
ಲಕ್ಷ್ಮಣ ನೀಲಣ್ಣವರ, ಮಹಾದೇವಪ್ಪ ಹಾದಿಮನಿ, ಶಿವಾಜಿ ನೀಲಣ್ಣವರ, ಲಕ್ಷ್ಮಣ ಸೋಮನಗೌಡ್ರ, ರಾಮಣ್ಣ ನೀಲಣ್ಣವರ, ಬಸವರಾಜ ದೇಯಣ್ಣವರ, ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.
IN MUDALGI Latest Kannada News