Breaking News
Home / ಬೆಳಗಾವಿ / ಇಂದಿನ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ:ಬಸವರಾಜ ಪಣದಿ

ಇಂದಿನ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ:ಬಸವರಾಜ ಪಣದಿ

Spread the love

ಇಂದಿನ ಯುಗದಲ್ಲಿ ಎಷ್ಟು ಓದಿದರೂ ಕಡಿಮೆ:ಬಸವರಾಜ ಪಣದಿ

ಬೆಟಗೇರಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳಿಗೆ ಸಾಮಾನ್ಯ ಜ್ಞಾನ ಅವಶ್ಯಕವಾಗಿದೆ. ಇಂದು ಶಾಲಾ ಮಕ್ಕಳು ಎಷ್ಟು ಓದಿದರೂ ಕಡಿಮೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಮತ್ತು ಸ್ಥಳೀಯ ಗ್ರಾಪಂ ಗ್ರಂಥಾಲಯ ಸಹಯೋಗದಲ್ಲಿ 75ನೇ ವರ್ಷದ ಸಂವಿಧಾನ ಸಂಭ್ರಮ ದಿನಾಚರಣೆ ಪ್ರಯುಕ್ತ ಸ್ಥಳೀಯ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಹಾಗೂ ಕಿಶೋರಿಗಾಗಿ ಆಯೋಜಿಸಿದ ನನ್ನ ಕನಸುಗಳು ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶಾಲಾ ಮಕ್ಕಳು ತಪ್ಪದೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳಸಿಕೊಳ್ಳಬೇಕು ಎಂದÀರು.
ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿಯ ಸರಕಾರಿ ಪ್ರೌಢ ಶಾಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕವಾಗಿ ವಿವಿಧ ಸಹಾಯ, ಸೌಲಭ್ಯ ಕಲ್ಪಿಸುತ್ತಿರುವ ಸ್ಥಳೀಯ ಗ್ರಾಮ ಪಂಚಾಯ್ತಿದವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಬೆಟಗೇರಿ ಗ್ರಾಮ ಪಂಚಾಯ್ತಿ ಮತ್ತು ಗ್ರಾಪಂ ಗ್ರಂಥಾಲಯ ವತಿಯಿಂದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.
ಇಲ್ಲಿಯ ಗ್ರಾಪಂ ಕಾರ್ಯದರ್ಶಿ ಎಮ್.ಪಿ.ತಳವಾರ ಪ್ರಕಾಶ ಕುರಬೇಟ, ವೈ.ಎಮ್.ವಗ್ಗರ, ಗಣಪತಿ ಭಾಗೋಜಿ, ಶುಭಾ.ಬಿ., ಈಶ್ವರ ಮುನ್ನೋಳ್ಳಿ, ಭಾಗ್ಯಶ್ರೀ ನಾಯ್ಕ, ಸಿರಾಜ ಜಿಡ್ಡಿಮನಿ, ಸೌಮ್ಯಶ್ರೀ ಗಂಗಾ, ನೇಹಾ ಕೊಳವಿ, ಶೋಭಾ ದಂಡಿನ, ಆನಂದ ಬಡಿಗೇರ, ಮಂಜುನಾಥ ಸವತಿಕಾಯಿ, ಅತಿಥಿ ಶಿಕ್ಷಕರು, ಗ್ರಾಪಂ ಕರ ವಸೂಲಿಗಾರ ಸುರೇಶ ಬಾಣಸಿ, ವಿಠಲ ಚಂದರಗಿ, ಲಕ್ಕಮ್ಮ ಚಂದರಗಿ, ಶಿವಾನಂದ ಐದುಡ್ಡಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಇದ್ದರು.


Spread the love

About inmudalgi

Check Also

ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

Spread the love   ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ ಕುಲಗೋಡ: ಮನೆ ಕಳ್ಳತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ