ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ಬಸವಶ್ರೀ ದಿನದರ್ಶಿಕೆ ಬಿಡುಗಡೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿ ಪ್ರಕಟಿಸಿದ ಸನ್ 2025ನೇ ಸಾಲಿನ ಬಸವಶ್ರೀ ದಿನದರ್ಶಿಕೆ ವಿಭಿನ್ನ, ಆಕರ್ಷಕವಾಗಿದೆ ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿ ಪ್ರಕಟಿಸಿದ ಸನ್ 2025ನೇ ವರ್ಷದ ಬಸವಶ್ರೀ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಪಾರದರ್ಶತೆ ಹಾಗೂ ವಿಶ್ವಾಸದ ಪ್ರತಿಬಿಂಬವಾಗಿರುವ ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿಯೂ ಹಲವಾರು ಸಮಾಜಮುಖಿ ಕಾರ್ಯಕೈಗೊಳ್ಳುತ್ತ ಸಾಗಿದೆ. ಮುಂದೆಯೂ ಜನಪರ ಕಾರ್ಯಕೈಗೊಳ್ಳಲಿ ಎಂದು ಹಾರೈಸಿದರು.
ಸ್ಥಳೀಯ ಬಸವೇಶ್ವರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಸವರಾಜ ಮಾಳೇದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಆಡಳಿತ ಮಂಡಳಿ ವತಿಯಿಂದÀ ಶ್ರೀಗಳನ್ನು ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ನೀಲಣ್ಣವರ, ಕಲ್ಲಪ್ಪ ಹುಬ್ಬಳ್ಳಿ, ಈಶ್ವರ ಬಡಿಗೇರ, ಶಿವನಪ್ಪ ಕಂಬಿ, ಶಿವು ಮೇಳೆನ್ನವರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ವೀರಭದ್ರ ದಂಡಿನ, ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಸಿದ್ನಾಳ, ಗುಳಪ್ಪ ಪಣದಿ, ಕಲ್ಮೇಶ ಬಿಸನಕೊಪ್ಪ, ಗೋಪಾಲ ಆಶೆಪ್ಪಗೋಳ, ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಗ್ರಾಮಸ್ಥರು ಇದ್ದರು.