ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವಾಸಿ, ಶತಾಯುಷಿ ಯಲ್ಲವ್ವ ಕೆಂಚಪ್ಪ ಕೋಣಿ (102) ಇವರು ಶುಕ್ರವಾರ ಮಾ.6ರಂದು ನಿಧನರಾದರು. ಮೃತರು ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಪರಮಾನಂದ ಕೋಣಿ ಸೇರಿದಂತೆ ಓರ್ವ ಪುತ್ರ, ಗೋಕಾಕ ತಾಪಂ ಮಾಜಿ ಅಧ್ಯಕ್ಷೆ ಕಸ್ತೋರೆವ್ವ ಪರಮಾನಂದ ಕೋಣಿ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂದು-ಬಳಗವನ್ನಗಲಿದ್ದಾರೆ.
ಸಂತಾಪ: ಬೆಟಗೇರಿ ಗ್ರಾಮದ ಶತಾಯುಷಿ ಯಲ್ಲವ್ವ ಕೆಂಚಪ್ಪ ಕೋಣಿ ಅವರ ನಿಧನಕ್ಕೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ರಾಜಕೀಯ ಮುಖಂಡರು, ಗಣ್ಯರು, ಸ್ಥಳೀಯರು ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.