ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ : ಬಸವರಾಜ ಪಣದಿ
ಬೆಟಗೇರಿ:ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರದ ಅಭಿವೃದ್ಧಿಗಾಗಿ ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.
ಮೂಡಲಗಿ ತಾಲೂಕಾ ಕೇಂದ್ರ ಹಾಗೂ ಮಮದಾಪೂರ ವಲಯದ ಶ್ರೀಕ್ಷೇಧಗ್ರಾ ಯೋಜನೆ ಕಾರ್ಯಕ್ಷೇತ್ರ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಏ.3ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವಿರೇಂದ್ರ ಹೆಗ್ಗಡೆಯವರು ನೀಡಿರುವ ಸುಮಾರು 1.5 ಲಕ್ಷ ರೂಪಾಯಿಗಳ ಡಿ.ಡಿ. ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.
ಬೆಟಗೇರಿ ಗ್ರಾಮದಲ್ಲಿ ನಿರ್ಮಾಣದ ಹಂತದಲ್ಲಿರುವ ಬಸವೇಶ್ವರ ದೇವಸ್ಥಾನ ಜಿರ್ಣೋದ್ಧಾರಕ್ಕೆ ಸ್ಥಳೀಯ ಶ್ರೀ ಬಸವೇಶ್ವರ ದೇವಸ್ಥಾನ ಕಟ್ಟಡ ನಿರ್ಮಾಣ ಸಮಿತಿಯವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವಿರೇಂದ್ರ ಹೆಗ್ಗಡೆಯವರು ನೀಡಿರುವ ಸುಮಾರು 1.5 ಲಕ್ಷ ರೂಪಾಯಿಗಳ ಡಿ.ಡಿ.ಯನ್ನು ಅಥಣಿ ಜಿಲ್ಲೆಯ ಶ್ರೀಕ್ಷೇಧಗ್ರಾಯೋಜನೆ ನಿರ್ದೇಶಕಿ ನಾಗರತ್ನಾ ಹೆಗಡೆ ಅವರು ವಿತರಿಸಿದ ಬಳಿಕ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ವಿವಿಧ ಕ್ಷೇತ್ರದಲ್ಲಿ ಕೈಗೊಂಡಿರುವ ಕಾರ್ಯ ಮತ್ತು ಶ್ರೀಕ್ಷೇಧಗ್ರಾಯೋಜನೆ ಕುರಿತು ಮಾತನಾಡಿದರು.
ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ತಾಲೂಕಾ ಯೋಜನಾಧಿಕಾರಿ ಮೂಡಲಗಿ ತಾಲೂಕಾ ಕೇಂದ್ರ ಶ್ರೀಕ್ಷೇಧಗ್ರಾಯೋ ಯೋಜನಾಧಿಕಾರಿ ರಾಜು ನಾಯ್ಕ, ಮಮದಾಪೂರ ವಲಯದ ಮೇಲ್ವಿಚಾರಕಿ ಚೈತ್ರಾ.ಪಿ., ಒಕ್ಕೂಟದ ಅಧ್ಯಕ್ಷೆ ನಾಗಮ್ಮ ನಾಯ್ಕರ, ಸತ್ತೆಪ್ಪ ಪೂಜೇರಿ, ಬಸಪ್ಪ ಮೇಳೆಣ್ಣವರ, ಮೆಳೆಪ್ಪ ಮೇಳೆಣ್ಣವರ, ಗುಳಪ್ಪ ಪಣದಿ, ಈರಣ್ಣ ಬಳಿಗಾರ, ರಾಮಪ್ಪ ಮುಧೋಳ, ಮಹಾದೇವ ದೇಯಣ್ಣವರ, ಮಧು ತಲ್ಲೂರ, ರುದ್ರಪ್ಪ ದೇಯಣ್ಣವರ, ಮಹಾದೇವ ಕತ್ತಿ, ಮಮದಾಪುರ ವಲಯದ ಎಲ್ಲ ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು, ಗಣ್ಯರು, ಗ್ರಾಮಸ್ಥರು ಇದ್ದರು.