Breaking News
Home / ಬೆಳಗಾವಿ / ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ
Srinagar, India - May 6th, 2009: Closed shops during a total strike at a street of Srinagar, Kashmir, India. Strikes or lockdowns often happen in Srinagar due to political situation.

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ ಮಂಗಳವಾರ ಜು.1 ಸೇರಿದಂತೆ ಮುಂದೆ ಬರುವ ವಾರದ ಪ್ರತಿ ಮಂಗಳವಾರ ಜು.8, ಶುಕ್ರವಾರ ಜು.11 ಮಂಗಳವಾರ ಜು.15, ಮಂಗಳವಾರ ಜು.22 ಸೇರಿ ಒಟ್ಟು 5 ದಿನ ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.

ಜು.1ರಂದು ಮುಂಜಾನೆ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಗಳಿಗೆ ಊರಿನ ಸೀಮೆಗೆ ಕರಿ ಕಟ್ಟುವದು ನಡೆದ ಬಳಿಕ ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ಕಟ್ಟಾ ವಾರ ಆಚರಣೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಬಾಕ್ಸ್ ಐಟಮ್: ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ : ಬೆಟಗೇರಿ ಗ್ರಾಮದಲ್ಲಿ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದರಿಂದ ವಾರದ ಮಂಗಳವಾರ ಮತ್ತು ಶುಕ್ರವಾರ ದಿನ ಸೇರಿ ಒಟ್ಟು 4 ಮಂಗಳವಾರ, 1 ಶುಕರವಾರ ದಿನ ಇಡೀ ಗ್ರಾಮದ ರೈತರ್ಯಾರೂ ವಾರದ ಈ 5 ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾ ಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು. ಆಸ್ಪತ್ರೆ ಮತ್ತು ಔಷಧ ಅಂಗಡಿ ಮಾತ್ರ ಬಾಗಿಲು ತೆರೆದಿರುತ್ತವೆ. ವಾರ ಹಿಡಿದ ಪ್ರಯುಕ್ತ ವಾರದ 5 ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.


Spread the love

About inmudalgi

Check Also

ಕುಲಗೋಡ ಗ್ರಾಮಕ್ಕೆ ಸತೀಶ ಜಾರಕಿಹೊಳಿ ಬೇಟಿ ಗ್ರಾಮಸ್ಥರಿಂದ ಮನವಿ

Spread the loveಕುಲಗೋಡ:ಮೂಡಲಗಿ-ಗೋಕಾಕ ತಾಲೂಕಿನ ರಸ್ತೆ ಮತ್ತು ಸೇತುವೆಗಳ ವಿಕ್ಷಣೆಗೆ   ಆಗಮಿಸಿದ ಲೋಕೋಪಯೋಗಿ ಸಚಿವರು ಸತೀಶ ಜಾರಕಿಹೋಳಿ ಮೂಡಲಗಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ