Breaking News
Home / ಬೆಳಗಾವಿ /  ಬೆಟಗೇರಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರ ಉದ್ಘಾಟನೆ

 ಬೆಟಗೇರಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರ ಉದ್ಘಾಟನೆ

Spread the love

 

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ನೂತನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಜುಲೈ.9 ರಂದು ಮುಂಜಾನೆ 10 ಗಂಟೆಗೆ ಸ್ಥಳೀಯ ವಿಪ್ರಾಗ್ರಾಕೃಸ ಸಂಘದ ಆವರಣದಲ್ಲಿ ನಡೆಯಲಿದೆ.
ಸುಣಧೋಳಿ ಶ್ರೀ ಜಡಿಸಿದ್ಧೇಶ್ವರÀ ಮಠದ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ, ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಈರಯ್ಯ ಹಿರೇಮಠ, ಹಣಮಂತ ವಡೇರ ನೇತೃತ್ವ, ಸ್ಥಳೀಯ ವಿಪ್ರಾಗ್ರಾಕೃಸ ಸಂಘದ ಅಧ್ಯಕ್ಷ ಬಸವಂತ ಕೋಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಸತೀಶ ಕಡಾಡಿ, ಜಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಸಂಘದ ಉಪಾಧ್ಯಕ್ಷ ರೇವಣಸಿದ್ಧ ಸವತಿಕಾಯಿ, ಬೈಲಹೊಂಗಲ ಸಹಾಯಕ ನಿಭಂದಕಿ ಶ್ರೀಮತಿ ಶಾಹಿನ್ ಅಖ್ತರ, ಬೆಳಗಾವಿ ಸಹಾಯಕ ಔಷಧ ನಿಯಂತ್ರಕ ಮೋಹನ ಕೆ.ಬಿ., ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ,ಗುರು,ಚರಮೂರ್ತಿಗಳು, ರಾಜಕೀಯ ಮುಖಂಡರು, ಗಣ್ಯರು, ಸಹಕಾರಿ ಹಿರಿಯ ಧುರೀಣರು, ವಿವಿಧ ಸಂಘ-ಸಂಸ್ಥಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ವಿಪ್ರಾಗ್ರಾಕೃಸ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮತ್ತೀತರರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ತಿಳಿಸಿದ್ದಾರೆ.


Spread the love

About inmudalgi

Check Also

Spread the love ಮೂಡಲಗಿ: ಸರ್ಕಾರಿ ಶಾಲೆಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೊಪ್ಪದಟ್ಟಿ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ