ನಿಧನ ವಾರ್ತೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶರಣ ಜೀವಿ, ಈಶ್ವರ ಭಜನಾ ಮಂಡಳಿ ಸದಸ್ಯ ಬಸನಗೌಡ ಶಿವರುದ್ರಗೌಡ ದೇಯಣ್ಣವರ(74) ಇವರು ಜುಲೈ.8ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಸೋಸೆ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ.
ಸಂತಾಪ: ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹಿರಿಯ ನಾಗರಿಕರು, ಹರ, ಗುರು, ಚರಮೂರ್ತಿಗಳು, ಗಣ್ಯರು, ಸ್ಥಳೀಯರು ಶರಣಜೀವಿ ಬಸನಗೌಡ ಶಿವರುದ್ರಗೌಡ ದೇಯಣ್ಣವರ ನಿಧನಕ್ಕೆ ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.