Breaking News
Home / ಬೆಳಗಾವಿ / ಬೆಟಗೇರಿ ಗ್ರಾಮದಲ್ಲ್ಲಿ ಜುಲೈ.22ರ ಮಂಗಳವಾರ ಕಟ್ಟಾ ವಾರ ಆಚರಣೆ

ಬೆಟಗೇರಿ ಗ್ರಾಮದಲ್ಲ್ಲಿ ಜುಲೈ.22ರ ಮಂಗಳವಾರ ಕಟ್ಟಾ ವಾರ ಆಚರಣೆ

Spread the love

 

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಮಳೆಗಾಗಿ ಗ್ರಾಮದಲ್ಲಿ ಕಳೆದ ಜು.1ರಿಂದ ಜು.22ರ ತನಕ 4 ಮಂಗಳವಾರ 1 ಶುಕ್ರವಾರ ವಾರ ಹಿಡಿದ ಹಿನ್ನಲೆಯಲ್ಲಿ ಕೊನೆಯ ಮಂಗಳವಾರ ಜುಲೈ.22ರಂದು ವಾರದ ಮಂಗಲೋತ್ಸವ ವಿವಿಧ ಕಾರ್ಯಕ್ರಮ ನಡೆಯಲಿವೆ.
ಜು.22ರಂದು ಗ್ರಾಮದ ಜನರು ಸ್ಥಳೀಯ ಎಲ್ಲ ದೇವಸ್ಥಾನಗಳಿಗೆ ತೆರಳಿ ಪೂಜೆ, ಉಡಿ ತುಂಬುವ, ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ ಸಂಜೆ.6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಪುರದೇವರ ಪಲ್ಲಕ್ಕಿ ಉತ್ಸವ, ಗ್ರಾಮದ ಹೊರ ವಲಯದಲ್ಲಿ ಊರಿನ ಸೀಮೆಗೆ ಕಟ್ಟಲಾದ ಕರಿಯನ್ನು ಹರಿಯುವ ಕಾರ್ಯಕ್ರಮ ಜರುಗಲಿದೆ.
ಜುಲೈ22ರ ಮಂಗಳವಾರ ಕಟ್ಟಾ ವಾರ ಆಚರಣೆ : ಬೆಟಗೇರಿ ಗ್ರಾಮದಲ್ಲಿ ಜು.22ರಂದು ಮಂಗಳವಾರ ದಿನವನ್ನು ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ. ಸುತ್ತಲಿನ ಹತ್ತೂರು ಹಳ್ಳಿಗಳಿಗೆ ಬೆಟಗೇರಿ ಗ್ರಾಮ ವ್ಯಾಪಾರ ವಹಿವಾಟದ ವಾಣಿಜ್ಯ ಕೇಂದ್ರ ಸ್ಥಳವಾಗಿದ್ದರಿಂದ ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಸಾರ್ವಜನಿಕರು ಸಹಕರಿಸಬೇಕು. ಇನ್ನೂ 1 ಮಂಗಳವಾರ ಜು.22ರ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ.
ಬೆಟಗೇರಿ ಗ್ರಾಮದ ರೈತರ್ಯಾರೂ ವಾರದ ಇನ್ನೂ 1 ಮಂಗಳವಾರ ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.
ಸ್ಥಳೀಯ ವಿವಿಧ ದೇವರ ಅರ್ಚಕರು, ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಸದಸ್ಯರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಡಾ. ಶಾಮನೂರು ಶಿವ ಶಂಕರಪ್ಪ(94) ನವರ ನಿಧನಕ್ಕೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತೀವ್ರ ಸಂತಾಪ

Spread the love ಮೂಡಲಗಿ: ಹಿರಿಯ ಮುತ್ಸದ್ದಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಾ. ಶಾಮನೂರು ಶಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ