ಬೆಟಗೇರಿ:ಮಹಾಮಾರಿ ಕರೊನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಪಂ ಸಿಬ್ಬಂದಿ ಅವರು ಕಳೆದೊಂದು ವಾರದಿಂದ ಗ್ರಾಮದ ಪ್ರಮುಖ ಸ್ಥಳ, ಓಣಿಗಳಲ್ಲಿ ಆಗಾಗ ಫಾಗಿಂಗ್ ಮಾಡುತ್ತಿರುವ ಕಾರ್ಯ ನಡೆದಿದೆ.
ಸ್ಥಳೀಯ ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಕರೊನಾ ವೈರಸ್ ಹರಡದಂತೆ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಲಾಕ್‍ಡೌನ್ ಸಮಯದಲ್ಲಿ ಅನವಶ್ಯಕವಾಗಿ ಸ್ಥಳೀಯರು ತಿರುಗಾಡಬಾರದು ಎಂದು ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಸ್ಥಳೀಯರಿಗೆ ತಿಳಿಸಿದ್ದಾರೆ.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ, ಗ್ರಾಪಂ ಸದಸ್ಯರು, ಇತರರು ಇದ್ದರು.
