Breaking News
Home / ಬೆಳಗಾವಿ / ಶಾಂತಿ, ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಬೇಕು: ಪಿಎಸ್‍ಐ ಬಿ.ಆನಂದ

ಶಾಂತಿ, ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಬೇಕು: ಪಿಎಸ್‍ಐ ಬಿ.ಆನಂದ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ವ ಧರ್ಮಿಯರು ಸೌಹಾರ್ದತೆಯಿಂದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಹೇಳಿದರು.

ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಮೂಡಲಗಿ ಪೊಲೀಸ್ ಠಾಣೆ ಸಿಪಿಐ ವೃತ್ತ ಕಛೇರಿ ಹಾಗೂ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಆ.15ರಂದು ನಡೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವದರಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್‍ನ್ನು ಅಹಿತಕರ ಘಟನೆ ನಡೆಯದಂತೆ ಶಾಂತತೆಯಿಂದ ಆಚರಿಸಬೇಕು ಎಂದರು.
ಸ್ಥಳೀಯರಿಗೆ ಸಲಹೆ:ಬೆಟಗೇರಿ ಗ್ರಾಮದ ಸ್ಥಳೀಯರು ದುಂದು ವೆಚ್ಚ ಮಾಡಿ ಗಣೇಶ ಹಬ್ಬ ಆಚರಿಸುವ ಬದಲು ಸಂಕಷ್ಟದಲ್ಲಿರುವ ಬಡವರಿಗೆ, ಅನಾಥಾಶ್ರಮದ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಬೇಕು. ಗಣೇಶ ವಿಸರ್ಜನೆಯ ಸಮಯದಲ್ಲಿ ಡಾಲ್ಬಿ ಸೌಂಡ ಸಿಸ್ಟಮ್ ಬಳಸುವುದು ಸಂಪೂರ್ಣ ನಿಷೇದಿಸಲಾಗಿದೆ. ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅವಕಾಶವಿದ್ದು, ಹೆಸ್ಕಾಂ ಮತ್ತು ಅಗ್ನಿಶ್ಯಾಮಕ ಹಾಗೂ ಪೊಲೀಸ್ ಠಾಣೆಯಿಂದ ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅನುಮತಿ ಪಡೆಯಬೇಕು. ಅಶ್ಲೀಲ, ಕೋಮು ಗಲಭೆ ಪ್ರಚೋದಿಸುವ ಹಾಡು, ಸಂಭಾಷಣೆಗಳನ್ನು ಬಿತ್ತರಿಸಬಾರದು ಎಂದು ಪಿಎಸ್‍ಐ ಬಿ. ಆನಂದ ಸ್ಥಳೀಯರಿಗೆ ಸಲಹೆಗಳನ್ನು ತಿಳಿಸಿದರು.
ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಲಖನ್ ಚಂದರಗಿ, ಶಂಕರ ಕೋಣಿ, ಮಾರುತಿ ಚಂದರಗಿ, ಪ್ರಕಾಶ ಹಾಲಣ್ಣವರ, ಗಿರೀಶ ಗಾಣಗಿ, ಈರಣ್ಣ ದೇಯಣ್ಣವರ, ಈರಪ್ಪ ಕಂಬಾರ, ಬಸವರಾಜ ದೇಯಣ್ಣವರ, ಸಂತೋಷ ಬಡಿಗೇರ, ರವಿ ದಾನವ್ವಗೋಳ, ಚಿದಾನಂದ ತಳವಾರ, ಅಶೋಕ ಹರಿಜನ, ಸುರೇಶ ತಳವಾರ, ಮುಖ್ಯಪೊಲೀಸ್ ಪೇದೆ ಎ.ಡಿ.ಹಡಗಿನಾಳ, ಮಾಳು ಆಡಿನ, ಸ್ಥಳೀಯ ವಿವಿಧ ಸಮಾಜದ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಯುವಕರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ