ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಗಜಾನನ ಯುವಕ ಮಂಡಳಿ(ಪೇಟೆ ಗಣಪತಿ)ಯವರು ಇಲ್ಲಿಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಗ್ರಾಮದ ಮಾರುಕಟ್ಟೆ ಜಾಗೆಯಲ್ಲಿರುವ ಗಜಾನನ ವೇದಿಕೆಯ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.
ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಗಣಪತಿ ಮೂರ್ತಿಗೆ ಪೂಜೆ-ಪುನಸ್ಕಾರ ನೆರವೇರಿಸಿದರು. ಆ.27ರಿಂದ ಸತತ 11 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನೆಗೆ ಪೂಜೆ-ಪುನಸ್ಕಾರ ಭಕ್ತಿಯಿಂದ ನಡೆಯಲಿದೆ. ಸೆ.6ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಲಿದೆ. ಗಣೇಶ ಪ್ರತಿಷ್ಠಾಪನೆಗೊಂಡ ಈ 11 ದಿನಗಳ ನಡುವೆ 1 ದಿನ ಅನ್ನಪ್ರಸಾದ ಸೇರಿದಂತೆ ಸಂಗೀತ-ರಸಮಂಜರಿ, ಹಾಗೂ ಮನೋರಂಜನೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಎಂದು ಇಲ್ಲಿಯ ಶ್ರೀ ಗಜಾನನ ಯುವಕ ಮಂಡಳಿ(ಪೇಟೆ ಗಣಪತಿ)ಯವರು ತಿಳಿಸಿದೆ.
ಈ ವೇಳೆ ಗಜಾನನ ಯುವಕ ಮಂಡಳ ಅಧ್ಯಕ್ಷ ಬಸವರಾಜ ದೇಯಣ್ಣವರ. ಗಿರೀಶ ಗಾಣಗಿ, ಶಂಭು ಹಿರೇಮಠ, ಸಂಗಯ್ಯ ಹಿರೇಮಠ, ಭರಮಣ್ಣ ಪೂಜೇರಿ, ವೀರಭದ್ರ ದೇಯಣ್ಣವರ, ಪೀರೋಜ ಮಿರ್ಜಾನಾಯ್ಕ, ನಾಗಪ್ಪ ಮಾಕಾಳಿ, ಅಶೋಕ ಆನೆಗುಂದಿ, ಮುತ್ತು ತೋಟಗಿ, ಆಕಾಶ ಕಂಬಾರ ಸೇರಿದಂತೆ ಇಲ್ಲಿಯ ಶ್ರೀ ಗಜಾನನ ಯುವಕ ಮಂಡಳಿ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.