ಬೆಟಗೇರಿ:ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಶ್ರೀವಿನಾಯಕ ಮಿತ್ರ ಮಂಡಳಿಯವರು ಇಲ್ಲಿಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಇಲ್ಲಿಯ ಗ್ರಾಮದೇವÀತೆ ದ್ಯಾಮವ್ವದೇವಿ ದೇವಾಲಯ ಹತ್ತಿರ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.
ಶ್ರೀ ವಿನಾಯಕ ಮಿತ್ರ ಮಂಡಳಿಯವರು ಸ್ಥಳೀಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಇಲ್ಲಿಯ ಗ್ರಾಮದೇವÀತೆ ದ್ಯಾಮವ್ವದೇವಿ ದೇವಾಲಯ ಹತ್ತಿರ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.
ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಗಣಪತಿ ಮೂರ್ತಿಗೆ ಪೂಜೆ-ಪುನಸ್ಕಾರ ನೆರವೇರಿಸಿದರು. ಆ.27ರಿಂದ ಸತತ 5 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನೆಗೆ ಪೂಜೆ-ಪುನಸ್ಕಾರ ಭಕ್ತಿಯಿಂದ ನಡೆಯಲಿದೆ. ಆ.30ರಂದು ಸಾಯಂಕಾಲ 6ಗಂಟೆಗೆ ಸಕಲರಿಗೂ ಅನ್ನಪ್ರಸಾದ ಜರುಗಲಿದೆ. ಆ31ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಲಿದೆ ಎಂದು ಇಲ್ಲಿಯ ಶ್ರೀ ವಿನಾಯಕ ಮಿತ್ರ ಮಂಡಳಿ ತಿಳಿಸಿದೆ.
ಈ ವೇಳೆ ಮಂಜುನಾಥ ಪತ್ತಾರ, ಶಿವು ನಾಯ್ಕರ, ಗುಳಪ್ಪ ಪಣದಿ, ವಿಠ್ಠಲ ಬಡಿಗೇರ, ಪ್ರಕಾಶ ಬಡಿಗೇರ, ರಾಘು ಬೆಟಗೇರಿ, ಸಿದ್ದಾರೂಢ ನಾಂವಿ, ಬಸು ಬಡಿಗೇರ, ಶಿವಾನಂದ ಪತ್ತಾರ, ದುಂಡಪ್ಪ ನೀಲಣ್ಣವರ, ಪ್ರವೀಣ ಪತ್ತಾರ, ಇಲ್ಲಿಯ ಶ್ರೀ ವಿನಾಯಕ ಮಿತ್ರ ಮಂಡಳಿ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.