ಬೆಟಗೇರಿ:ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರಿಡೆಯಲ್ಲಿಯೂ ಉತ್ತಮ ಸಾಧನೆ ಮಾಡಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆ.29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದಷ್ಟೇ ಕ್ರೀಡೆ ಮುಖ್ಯವಾಗಿದೆ. ಶಾಲಾ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ತುಂಬಲು ಈ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಶಾಲೆಯ ದೈಹಿಕ ಶಿಕ್ಷಕ ಈಶ್ವರ ಮುನವಳ್ಳಿ ಮಾತನಾಡಿ, ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆಯಾಗಿದೆ ಮೇಜರ್ ಧ್ಯಾನಚಂದ ಅವರ ಕ್ರೀಡಾ ಮತ್ತು ಜೀವನದ ಬಗ್ಗೆ, ವಿದ್ಯಾರ್ಥಿಗಳಿಗೆ ಕ್ರೀಡೆಗಳಿಂದಾಗುವ ಪ್ರಯೋಜನಗಳ ಕುರಿತು ತಿಳಿಸಿದರು. ಮೇಜರ್ ಧ್ಯಾನಚಂದ ಅವರ ಭಾವಚಿತ್ರಕ್ಕೆ ಪೂಜೆ,ಪುಷ್ಪಾರ್ಪನೆ ಸರ್ಮಪಿಸಿದ ಬಳಿಕ ಸಿಹಿ ವಿತರಿಸಲಾಯಿತು. ಶಾಲಾವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಕ್ರೀಡಾ ಪ್ರತಿಜ್ಞಾ ವಿಧಿ ಮಾಡಿದರು.
ಈರಣ್ಣ ಪಟಗುಂದಿ, ರಾಕೇಶ ನಡೋಣೆ, ರಮೇಶ ಬುದ್ನಿ, ವೈ.ಎಮ್.ವಗ್ಗರ, ಗಣಪತಿ ಭಾಗೋಜಿ, ಶುಭಾ.ಬಿ., ಭಾಗ್ಯಶ್ರೀ ನಾಯಕ, ಸೌಮ್ಯಾಶ್ರೀ ಗಂಗಾ, ಮಲ್ಹಾರಿ ಪೋಳ, ಸಹ ಶಿಕ್ಷಕರು, ಶಾಲೆಯ ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.
