ಬೆಟಗೇರಿ:ಜನ ಮೆಚ್ಚುಗೆಗೆ ಪಾತ್ರವಾದ ಇಲ್ಲಿಯ ಗಜಾನನ ಗೆಳೆಯರ ಬಳಗದವರು ಹಲವು ವರ್ಷಗಳಿಂದ ಡಾ. ಅಂಬೇಡ್ಕರ ವ್ರತ್ತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಯ, ಭಕ್ತಿಯಿಂದ ಪೂಜಿಸಿ ಗಣಪತಿಯ ಕೃಪೆಗೆ ಪಾತ್ರರಾಗುತ್ತಿರುವ ಸೇವಾಕಾರ್ಯ ಮೆಚ್ಚುವಂತಹದಾಗಿದೆ ಎಂದು ಬೆಟಗೇರಿ ಯು ಧೂರೀಣ ಈರಣ್ಣ ದೇಯಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗಜಾನನ ಗೆಳೆಯರ ಬಳಗದವರ ಸಹೋಗದಲ್ಲಿ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ ಪ್ರಯುಕ್ತ ಸೆ.1ರಂದು ರಾತ್ರಿ 10 ಗಂಟೆಗೆ ನಡೆದ ಶಿವಭಜನೆ, ಜಾಗರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅನ್ನನೀಡುವ ಕೈಗೆ ಯಾವಾಗಲೂ ಅನ್ನ ಕಡಿಮೆ ಆಗುವುದಿಲ್ಲಾ, ಎಲ್ಲರೂ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಅನ್ನ ನೀಡುವ ಪ್ರವೃತ್ತಿ ಮೈಗೊಡಿಸಿಕೊಳ್ಳಬೇಕು ಎಂದರು.
ಆ.27ರಿಂದ ಸೆ.2ರ ತನಕ ಸತತ 7 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನೆಗೆ ಪೂಜೆ-ಪುನಸ್ಕಾರ ಭಕ್ತಿಯಿಂದ ಜರುಗಿತು. ಸೆ.1ರಂದು ರಾತ್ರಿ 10ಗಂಟೆಗೆ ಸ್ಥಳೀಯ ಈಶ್ವರ ಭಜನಾ ಮಂಡಳಿ ಸದಸ್ಯರಿಂದ ಶಿವ ಭಜನೆ, ಶಿವ ನಾಮಸ್ಮರಣೆ ಹಾಗೂ ಜಾಗರಣೆ ನಡೆದು, ಸೆ.2ರಂದು ಮಧ್ಯಾಹ್ನ 12ಗಂಟೆಗೆ ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ, ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಿತು.
ಈ ವೇಳೆ ಸುಭಾಷ ಮುಧೋಳ, ಸಂತೋಷ ಕುಡಚಿ, ಚೆನ್ನಪ್ಪ ದಂಡಿನ, ಶಂಕರ ಕಡಕಭಾಂವಿ, ಸಿದ್ದು ತೋಟಗಿ, ಶಿವಾನಂದ ಮುಧೋಳ, ಈರಪ್ಪ ದೇಯಣ್ಣವರ, ವೀರಭದ್ರ ದಂಡಿನ, ರಾಜು ದಂಡಿನ, ಮಲ್ಲಿರ್ಕಾಜುನ ಬಳಿಗಾರ, ಚಂದು ಕುಡಚಿ, ರವಿ ಬೆನ್ನಾಳೆ, ರಮೇಶ ಬಳಿಗಾರ, ರಮೇಶ ಸೂಜಿ, ಇಲ್ಲಿಯ ಗಜಾನನ ಗೆಳೆಯರ ಬಳಗದ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.