ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀ ನಗರ ತೋಟದ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ-2025ರ ಅಭಿಯಾನದ ಪ್ರಯುಕ್ತ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮ ಸೆ.25ರಂದು ನಡೆಯಿತು.
ಬೆಟಗೇರಿ ಗ್ರಾಮದ ಎಲ್ಲಾ 7 ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಹಾಗೂ ಮತ್ತೀತರ ಪ್ರಮುಖ ಸ್ಥಳಗಳಲ್ಲಿ ಕಸಗೊಡಿಸುವ ಮತ್ತು ಕೇಂದ್ರಗಳ ಮುಖ್ಯ ದ್ವಾರದ ಮುಂದೆ ವಿವಿಧ ಚಿತ್ರಗಳ ರಂಗೋಲಿ ಹಾಕಿದ ಬಳಿಕ ಸ್ವಚ್ಛತೆ ಕುರಿತು ಮಕ್ಕಳು ಮತ್ತು ಸ್ಥಳೀಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು ಎಂದು ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್.ಯಡ್ರಾಂವಿ ತಿಳಿಸಿದ್ದಾರೆ.
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷೀ ಹೊಸಟ್ಟಿ, ಸಹಾಯಕರಾದ ಸತ್ತೆವ್ವ ವರ್ಗನ್ನವರ, ಮಹಾದೇವಿ ಹೊರಟ್ಟಿ, ಮಂಗಲಾ ಹೊರಟ್ಟಿ ಸೇರಿದಂತೆ ಅಂಗನವಾಡಿ ಮಕ್ಕಳು, ಪಾಲಕರು, ಸ್ಥಳೀಯರು ಇದ್ದರು.