ಬೆಟಗೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಧಾರಾಕಾರ ಮಳೆ
*ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಸೆ.26 ಮತ್ತು ಸೆ.27ರಂದು ಹಗಲುರಾತ್ರಿ ಧಾರಾಕಾರ ಸುರಿದ ಮಳೆಯಿಂದ ಇಲ್ಲಿಯ ಭೂಮಿಯನ್ನು ತಂಪಾಗಿಸಿದೆ. ಒಂದಡೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರಿಗೆ ಮಾಳೆಯಾಗಿ ಸಂತಸವಾದರೆ ಇನ್ನೂದಡೆ ಭೂಮಿಯಲ್ಲಿದ್ದ ಕೇಲವು ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಇಲ್ಲಿಯ ರೈತರಿಗೆ ಎದುರಾಗಿದೆ.
ಈ ಮಳೆ ಹಗಲಿರುಳು ಬಿಡದೆ ಸುರಿದು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ಬಹುತೇಕ ಹೊಲ-ಗದ್ದೆಗಳಲ್ಲಿರುವ ಗೋವಿನಜೋಳ ಸೇರಿದಂತೆ ಭೂಮಿಯಲ್ಲಿದ್ದ ಇನ್ನೂ ಕೆಲವು ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಸ್ಥಳೀಯ ರೈತರಲ್ಲಿ ಮೂಡಿದೆ.
ಸ್ಥಳೀಯ ಮತ್ತು ಜನ- ದನಕರುಗಳ ಜೀವನ ಸುರಿಯುತ್ತಿರುವ ಈ ಮಳೆಗೆ ಅಸ್ಥವ್ಯಸ್ಥಗೊಂಡಿದೆ. ಸೆ.27 ರಂದು ಮುಂಜಾನೆ ಎಡಬಿಡದೆ ಸುರಿಯುತ್ತಿರುವ ಮಳೆಗೆ ದನಕರುಗಳ ಮೇವು ತರಲು ಹೊಲಗದ್ದೆಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ಇಲ್ಲಿಯ ರೈತರಿಗೆ ಬಂದೊದಗಿತ್ತು.
ಮಳೆ ನೀರಿನಿಂದ ಬೆಟಗೇರಿ ಗ್ರಾಮದ ಪಕ್ಕದಲ್ಲಿರುವ ಯರವಂಕಿ ಹಾದಿಗೆ ಕಟ್ಟಲಾಗಿರುವ ಹಳ್ಳದ ಸೇತುವೆ ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಈ ರಸ್ತೆ ಮೇಲೆ ನಿತ್ಯ ಸಂಚರಿಸುವ ಯರವಂಕಿ ಹಾದಿಯ ತೋಟಪಟ್ಟಿಯಲ್ಲಿ ವಾಸವಾಗಿರುವ ಜನರು, ರೈತರು ಆ ಕಡೆಯಿಂದ ಈ ಕಡೆ ಬೆಟಗೇರಿ ಗ್ರಾಮಕ್ಕೆ ಬರಲು ಶನಿವಾರದಂದು ಮುಂಜಾನೆ ಪರದಾಡುವಂತಾಗಿದೆ.
ಈಗ ಸುರಿಯುತ್ತಿರುವ ಮಳೆ ನೀರಿಗೆ ಬೆಟಗೇರಿ ಗ್ರಾಮದ ಪಕ್ಕದಲ್ಲಿರುವ ಈ ಹಳ್ಳ ತನ್ನ ಒಡಲು ತುಂಬಿ ಹರಿಯುತ್ತಿರುವದನ್ನು ಶನಿವಾರ ಸೆ.27 ರಂದು ಮುಂಜಾನೆಯಿಂದ ಸಂಜೆವರೆಗೆ ಸ್ಥಳೀಯರು ಹಳ್ಳದ ನೀರು ನೋಡಲು ಹೋಗುತ್ತಿರುವದು ಸಾಮಾನ್ಯವಾಗಿತ್ತು.