
ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾರಿಗೂ ಮೋಸಮಾಡದೇ ಹಾಗೂ ದುಶ್ಚಟಗಳ ದಾಸರಾಗದೇ ಉತ್ತಮ ರೀತಿಯಲ್ಲಿ ಬದುಕಬೇಕು ಎಂದು ಮಾನವ ಕಂಪ್ಯೂಟರ್ ಎಂದು ಖ್ಯಾತರಾದ ಅಥಣಿಯ ಬಸವರಾಜ ಉಮರಾಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅ.28ರಂದು ಹಮ್ಮಿಕೊಂಡ ಪ್ರೇರಣಾ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ ಎಂದರು.
ಮಾನವ ಕಂಪ್ಯೂಟರ್ ಎಂದು ಖ್ಯಾತರಾದ ಬಸವರಾಜ ಉಮರಾಣಿ ಅವರು ತಮ್ಮ ಬದುಕಿನ ಕೇಲವು ವಿಷಯಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ನಾನು ಬಾಹ್ಯ ಕಣ್ಣಿನಿಂದ ಜಗತ್ತು ನೋಡಲು ಆಗದಿದ್ದರೂ, ಅಂತರಂಗದ ಕಣ್ಣಿನಿಂದ ಜಗತ್ತುನ್ನು ನೋಡಿದ್ದೇನೆ ಎಂದರು.
ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ವತಿಯಿಂದ ಮಾನವ ಕಂಪ್ಯೂಟರ್ ಎಂದು ಖ್ಯಾತರಾದ ಬಸವರಾಜ ಉಮರಾಣಿ ಅವರನ್ನು ಸತ್ಕರಿಸಿದರು. ಗಣಿತದ ಅಂಕಿ ಸಂಖ್ಯೆಗಳ ವ್ಯವಕಲನ, ಸಂಕಲನ, ಭಾಗಾಕಾರಗಳ ಕುರಿತು ಬಸವರಾಜ ಉಮರಾಣಿ ಹಲವು ಚಮತ್ಕಾರದ ಉತ್ತರ ನೀಡಿ ಎಲ್ಲರೂ ಬೆರಗಾಗುವಂತೆ ಮಾಡಿದರು. ಶಾಲಾ ವಿದ್ಯಾರ್ಥಿಗಳ ಜೋತೆ ಕಲವು ಗಣಿತದ ವಿಷಯಗಳ ಕುರಿತು ಚರ್ಚಿಸಿ, ಪರಿಹಾರ ಸೂಚಿಸಿದರು.
ಶಾಲೆಯ ಸಹಶಿಕ್ಷಕರಾದ ಈಶ್ವರ ಮುನವಳ್ಳಿ, ವೈ.ಎಮ್.ವಗ್ಗರ, ಗಣಪತಿ ಭಾಗೋಜಿ, ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ಶುಭಾ. ಬಿ., ಭಾಗ್ಯಶ್ರೀ ನಾಯಕ, ರಾಕೇಶ ನಡೋಣೆ, ಮಂಜುನಾಥ ಸವತಿಕಾಯಿ, ಆನಂದ ಬಡಿಗೇರ, ಸಿರಾಜಅಹ್ಮದ ಜಿಡ್ಡಿಮನಿ, ಚೇತನ ಕಮತ, ಸವಿತಾ ಜೋಗಿ, ಸೌಮ್ಯಾಶ್ರೀ ಗಂಗಾ., ನಾಗರಾಜ ಅರಳಿಮಟ್ಟಿ, ಶ್ರೀ ಲಕ್ಷ್ಮೀ ಕಾಶಪ್ಪನ್ನವರ, ಮಲ್ಹಾರಿ ಪೋಳ, ಅತಿಥಿ ಶಿಕ್ಷಕರು, ಸಿಬಂ್ಬದಿ ವರ್ಗ, ವಿದ್ಯಾರ್ಥಿಗಳು ಇದ್ದರು.
IN MUDALGI Latest Kannada News